ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಇಬ್ಬರು ಪ್ರಯಾಣಿಕರಿಂದ 11. 44 ಲಕ್ಷ ರೂ.ಮೌಲ್ಯದ ಕಳ್ಳಸಾಗಾಣಿಕೆ ಮಾಡಲಾಗುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳಾ ಹಾಗೂ ಪುರುಷ ಪ್ರಯಾಣಿಕರಿಬ್ಬರು ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಅ.17 ರಂದು ಬಂದಿಳಿದಿದ್ದಾರೆ. ಈ ವೇಳೆ ಪುರುಷ ಪ್ರಯಾಣಿಕ ಮಾಸ್ಕ್ ಧರಿಸಿದ್ದು, ಆತನ ಕೆನ್ನೆ ಭಾಗದಲ್ಲಿ ಅಸಹಜತೆ ಕಂಡು ಬಂದ ಹಿನ್ನಲೆಯಲ್ಲಿ ತಪಾಸಣೆ ನಡೆಸಿದಾಗ ಎರಡು ಚಿನ್ನದ ತುಂಡುಗಳನ್ನು ತನ್ನ ಬಾಯಿಯಲ್ಲಿ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಇನ್ನು ಮಹಿಳಾ ಪ್ರಯಾಣಿಕಳು ತಲೆಕೂದಲಿಗೆ ಹಾಕಿಕೊಂಡಿದ್ದ ಬ್ಯಾಂಡ್ ಪರಿಶೀಲಿಸಿದಾಗ ರೋಡಿಯಮ್ ಲೇಪಿತ ಮಣಿಗಳಂತೆ ಹೇರ್ ಬ್ಯಾಂಡ್ ಕಂಡು ಬಂದಿದ್ದು ತಪಾಸಣೆ ವೇಳೆ ಚಿನ್ನ ಪತ್ತೆಯಾಗಿದೆ. ಎರಡು ಪ್ರಕರಣಗಳಲ್ಲಿ, 24 ಕ್ಯಾರೆಟ್‌ನ ಚಿನ್ನವು ಸಂಪೂರ್ಣವಾಗಿ ತೂಗುತ್ತದೆ.
ಈ ಇಬ್ಬರು ಪ್ರಯಾಣಿಕರಿಂದ 1,44,090 ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 191 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.