ಭಾರತದಿಂದ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಲು ಮಾಲ್ದೀವ್ ದೇಶ ಹೆಣಗಾಡುತ್ತಿದೆ. ಸದ್ಯಕ್ಕೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಭಾರತದಿಂದ ಪಡೆದ 34500 ಕೋಟಿ ಸಾಲವನ್ನು ಮನ್ನಾ ಮಾಡುವಂತೆ ಭಾರತಕ್ಕೆ ಮನವಿ ಮಾಡಲು ಮುಂದಾಗಿದೆ. ಮಾಲ್ದೀವ್ಸ್ ಅಧ್ಯಕ್ಷ ಮೊಮ್ಮದ್ ಮುಯಿಜು ಈ ಬಗ್ಗೆ ಸ್ಥಳೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. ಈ ಹಿಂದಿನ ಸರ್ಕಾರ ದೇಶದ ಆರ್ಥಿಕತಯನ್ನೂ ಮೀರಿ ಭಾರತದಿಂದ ಸಾಲ ಪಡೆದುಕೊಂಡಿತ್ತು. ಆ ಸಾಲದ ಹಣದಲ್ಲಿ ದೇಶದಲ್ಲಿ ಹಲವು ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಸದ್ಯಕ್ಕೆ ಸಾಲ ಮರು ಪಾವತಿ ಮಾಡುವ ಪರಿಸ್ಥಿತಿಯಲ್ಲಿ ದೇಶ ಇಲ್ಲ . ಹೀಗಾಗಿ ಅಭಿವೃದ್ದಿ ಯೋಜನೆಯನ್ನು ನಿಲ್ಲಿಸುವ ಬದಲಾಗಿ ಭಾರತದ ಬಳಿ ಸಾಲ ಮರುಪಾವತಿಗೆ ವಿನಾಯಿತಿ ನೀಡುವಂತೆ ಕೋರಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಪ್ರಧಾನಿಯನ್ನು ಟೀಕಿಸುವ ಮೂಲಕ ದೊಡ್ಡ ವಿವಾದವನ್ನು ಮಾಲ್ದೀವ್ಸ್ ಮೈಮೇಲೆ ಎಳೆದುಕೊಂಡಿತ್ತು. ಇದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಲಕ್ಷಾದ್ವೀಪದಲ್ಲಿ ಪ್ರವಾಸೋಧ್ಯಮ ಅಭಿವೃದ್ದಿಗೆ ಒತ್ತು ನೀಡುವ ನಿಟ್ಟಿನಲ್ಲಿ ಲಕ್ಷಾದ್ವೀಪದ ಬೀಚ್‌ನಲ್ಲಿ ಓಡಾಡಿದ್ದರು. ಆ ಮೂಲಕ ಮಾಲ್ದೀವ್ ಪ್ರವಾಸೋಧ್ಯಮಕ್ಕೆ ದೊಡ್ಡ ಹೊಡೆತ ಕೂಡಾ ನೀಡಿದ್ದರು. ಆದ್ರೆ ಇದೀಗ ಮಾಲ್ದೀವ್ ಅದ್ಯಕ್ಷ ಮೊಹಮ್ಮದ್ ಮುಯಿಜು ಸಾಲ ತೀರಿಸಲಾಗದೆ ಭಾರತದ ಮುಂದೆ ಮಂಡಿಯೂರುತ್ತಿದ್ದಾರೆ.