ಮಕ್ಕಳಲ್ಲಿ ಒಂದು ವೇಳೆ ಮಗುವಿಗೆ ಟೈಪ್ 1 ಮಧುಮೇಹ ಇರುವುದು ಪತ್ತೆಯಾದರೆ ಅವರ ಜೀವನದ ದಾರಿಯೇ ಬದಲಾಗುತ್ತದೆ.
ಟೈಪ್ 1 ಮಧುಮೇಹದ ಜೊತೆಗೆ ಮಗು ಆರೋಗ್ಯಕರ ಜೀವನವನ್ನು ನಡೆಸಬಹುದು ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ಮಧುಮೇಹವನ್ನು ನಿರ್ವಹಿಸಬಹುದಾಗಿದೆ. ಪೋಷಕರು ಮಗುವಿಗೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡಿಸುವುದರಿಂದ ಮಗುವಿನ ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ವಿಚಾರದಲ್ಲಿ ಧನಾತ್ಮಕ ಪರಿಣಾಮ
ಉಂಟು ಮಾಡಬಹುದು ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.