ಬೆಂಗಳೂರು: ಕಳಪೆ SSLC ರಿಸಲ್ಟ್ ಬಂದ ಬೆನ್ನಲ್ಲೇ ತೀವ್ರ ಛೀಮಾರಿ ಹಾಕಿಸಿಕೊಂಡ ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮಕ್ಕಳಿಗೆ ಓಪನ್ ಬುಕ್ ಪರೀಕ್ಷೆ ನಡೆಸಲು ಪ್ಲಾನ್ ಮಾಡಿದ್ದು, ಶಾಲಾ ಮಟ್ಟದಲ್ಲಿ ಕಿರು ಪರೀಕ್ಷೆಗೆ ಮಾತ್ರ ಈ ಓಪನ್ ಬುಕ್ ಸಿಸ್ಟಂ ಸೀಮಿತ ಆಗಿರುತ್ತದೆ. ವಾರ್ಷಿಕ ಮುಖ್ಯ ಪರೀಕ್ಷೆಗೆ ನಡೆಸೋ ಬಗ್ಗೆ ಯಾವುದೇ ತೀರ್ಮಾನವಿಲ್ಲ.
ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಇಲಾಖೆಯಿಂದ ಸೂಚನೆ ಕೊಟ್ಟಿದ್ದು, ಸಮಯ ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಉತ್ತರಿಸಲು ಅವಕಾಶ ನೀಡಬೇಕು ಅಂತ ತಿಳಿಸಿದೆ. ಈ ಬಗ್ಗೆ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖ ಮಾಡಿ ಹೈಸ್ಕೂಲ್ ಶಿಕ್ಷಕರಿಗೆ ಸೂಚನೆ ಕೊಡಲಾಗಿದೆ. ಓಪನ್ ಬುಕ್ ಎಕ್ಸಾಂ ಇದ್ದಾಗ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಲು ನೆರವಾಗುತ್ತದೆ.
ಪಠ್ಯ, ನೋಟ್ ಬುಕ್ ಮತ್ತು ಸಂಬಂಧಿತ ರೆಫರೆನ್ಸ್ ಬುಕ್‌ಗಳಲ್ಲಿ ಯಾವ ವಿಷಯ ಎಲ್ಲಿದೆ? ಅದರ ಬಳಕೆ ಹೇಗೆ ಎಂಬ ಸ್ಪಷ್ಟ ಅರಿವು ಅವರಿಗೆ ಇರಬೇಕಾಗುತ್ತದೆ ಅಂತ ಈ ಕ್ರಮ ಅನುಸರಿಸಲಾಗುತ್ತಿದೆ.