ಮಕ್ಕಳ ಹೊಟ್ಟೆಯಲ್ಲಿ ಜಂತುಹುಳುಗಳ ಕಾಟಕ್ಕೆ ಪರಿಹಾರ

ಸಾಮಾನ್ಯವಾಗಿ 1ರಿಂದ 10 ವರ್ಷದೊಳಗಿನ ಮಕ್ಕಳಿಗೆ ಹೊಟ್ಟೆಯಲ್ಲಿ ಬೆಳೆಯುವ ಹುಳಗಳು ಸೋಂಕು ತರುತ್ತವೆ. ಹೆಚ್ಚಿನ ಹುಳಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಮಕ್ಕಳು ಮಲವಿಸರ್ಜನೆ ಮಾಡುವ ಜಾಗದಲ್ಲಿ ಕೆಂಪಾಗಿರುತ್ತದೆ, ತುರಿಕೆಯೂ ಇರುತ್ತದೆ. ರಾತ್ರಿ ವೇಳೆ ಹುಳಗಳು ಹೊರಗೆ ಬಂದು ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಮಕ್ಕಳು ರಾತ್ರಿ ನಿದ್ರೆ ಮಾಡಲಾಗದೆ ಒದ್ದಾಡುತ್ತಾರೆ. ಮಕ್ಕಳಲ್ಲಿ ಹುಳುಗಳು ಉಂಟಾಗುವಿಕೆಗೆ ಶುಚಿತ್ವದ ಕೊರತೆ ಮುಖ್ಯ ಕಾರಣ. ಈ ಹುಳಗಳು ಸಾಮಾನ್ಯವಾಗಿ ಕಳಪೆ ವೈಯಕ್ತಿಕ ನೈರ್ಮಲ್ಯ ಮತ್ತು ಅಶುಚಿಯಾದ ಪರಿಸರದಿಂದ ಉಂಟಾಗುತ್ತದೆ. ಮಕ್ಕಳ ಕೈಗಳನ್ನು ಆಗಾಗ ತೊಳೆಸುವುದು, ಅವರು ಬಾಯಿಗೆ ಹಾಕುವ ವಸ್ತುಗಳನ್ನು ತೊಳೆದು ಕ್ಲೀನ್ ಆಗಿಡುವುದು ಬಹಳ ಮುಖ್ಯ.

ಇದು ಮಗುವಿನ ಒಟ್ಟಾರೆ ಯೋಗಕ್ಷೇಮ ಮತ್ತು ಭವಿಷ್ಯವನ್ನು ರಕ್ಷಿಸುತ್ತದೆ. ಮಕ್ಕಳಲ್ಲಿ ಹುಳುಗಳು ಉಂಟಾಗುವಿಕೆಯ ಕೆಲವು ಲಕ್ಷಣಗಳು ಇಲ್ಲಿವೆ ಹುಳುಗಳು ಉಂಟಾಗಿರುವುದರ ಸಾಮಾನ್ಯ ಲಕ್ಷಣಗಳೆಂದರೆ ಮಗುವಿನ ಗುದದ್ವಾರದಲ್ಲಿ ತುರಿಕೆ ಮತ್ತು ಹಸಿವಿನ ಕೊರತೆ. ಊಟದ ನಂತರ ಹೊಟ್ಟೆ ಉಬ್ಬುವುದು ಮತ್ತು ಆಗಾಗ ಅಜೀರ್ಣ ಉಂಟಾಗುವುದು. ಕೆಲವೊಮ್ಮೆ ವಾಂತಿ ಕೂಡ ಆಗಬಹುದು. ಈ ಹೊಟ್ಟೆ ಹುಳಗಳ ಆರಂಭಿಕ ಚಿಹ್ನೆಗಳನ್ನು ಕಡೆಗಣಿಸಿದರೆ ದೀರ್ಘಕಾಲದ ಸಮಸ್ಯೆ ಹಾಗೂ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಇದರಿಂದ ಮಗುವಿನ ತೂಕ ಕಡಿಮೆಯಾಗುತ್ತದೆ, ಕಣ್ಣುಗಳು ಒಣಗುತ್ತದೆ, ವಿಟಮಿನ್ ಎ ಕೊರತೆ, ಕಿರಿಕಿರಿ, ರಕ್ತಹೀನತೆಯ ಲಕ್ಷಣಗಳು ಮತ್ತು ಅಪೌಷ್ಟಿಕತೆ ಕೂಡ ಉಂಟಾಗುತ್ತದೆ. ಮಕ್ಕಳಲ್ಲಿ ಹೊಟ್ಟೆ ಹುಳ ನಿಯಂತ್ರಿಸುವುದು ಹೇಗೆ?: ಸರಿಯಾದ ಆಹಾರ ನಿರ್ವಹಣೆ: ಮಕ್ಕಳಿಗೆ ನೀಡುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಶುದ್ಧ ನೀರು:ಕಲುಷಿತ ನೀರನ್ನು ಮಕ್ಕಳಿಗೆ ಕೊಡಬೇಡಿ.

ನೀರನ್ನು ಕುದಿಸಿದ ನಂತರ ಕುಡಿಸಿ ನಿಯಮಿತವಾಗಿ ಮಕ್ಕಳಿಗೆ ಸ್ನಾನ ಮಾಡಿಸಿ ಮತ್ತು ಬಟ್ಟೆಗಳನ್ನು ಬದಲಾಯಿಸಿ. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ. ಹುಳುಗಳ ಮೊಟ್ಟೆಗಳನ್ನು ಸೇವಿಸುವ ಅಪಾಯವನ್ನು ಕಡಿಮೆ ಮಾಡಲು ಊಟಕ್ಕೆ ಮೊದಲು ಮತ್ತು ಶೌಚಾಲಯವನ್ನು ಬಳಸಿದ ನಂತರ ಸಾಬೂನು ಮತ್ತು ನೀರಿನಿಂದ ಮಕ್ಕಳಿಗೆ ಕೈಗಳನ್ನು ತೊಳೆಯಲು ಕಲಿಸಿ. ಓಂಕಾಳು ಮತ್ತು ಬೇವಿನ ಎಲೆಗಳು ಎರಡು ಸಹ ತುಂಬಾ ಕಹಿ ಅನುಭವ ಕೊಡುತ್ತವೆ. ಮಕ್ಕಳಿಗಂತೂ ಇದು ಇಷ್ಟವಾಗು ವುದಿಲ್ಲ. ಆದರೆ ಈ ಮಿಶ್ರಣದ ಸೇವನೆಯಿಂದ ಹೊಟ್ಟೆಯ ಆರೋಗ್ಯ ಮಾತ್ರ ಅಭಿವೃದ್ಧಿಯಾಗುತ್ತದೆ.​ಬೇವಿನ ಹಸಿ ಎಲೆಗಳನ್ನುತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಗ್ರೈಂಡರ್ ನಲ್ಲಿ ಹಾಕಿ ಪೇಸ್ಟ್ ಮಾಡಬೇಕು.ಇದರ ಜೊತೆಗೆ ಅರ್ಧ ಟೀ ಚಮಚ ಓಂ ಕಾಳುಗಳನ್ನು ಹಾಕಿರಬೇಕು. ಇದನ್ನು ಉಂಡೆಯ ಆಕಾರದಲ್ಲಿ ಮಾಡಿ ನಿಮ್ಮ ಮಗುವಿಗೆ ಮಾತ್ರೆಯ ತರಹ ನೀರಿನ ಸಹಿತ ನುಂಗಲು ಕೊಡಬೇಕು.

Advertisement

​ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ಇಲ್ಲಿ ಬಳಸಲಾ ಗಿರುವ ಓಂ ಕಾಳು ತನ್ನಲ್ಲಿ ಕರುಳಿನ ಭಾಗದಲ್ಲಿರುವ ಕೀಟಗಳು ಮತ್ತು ಹುಳುಗಳನ್ನು ಕೊಲ್ಲುವ ಶಕ್ತಿಯನ್ನು ಪಡೆದಿದೆ.ಇದು ಬೇವಿನ ಎಲೆಗಳ ಜೊತೆ ಮಿಕ್ಸ್ ಆದಾಗ ಆಂಟಿ ಬ್ಯಾಕ್ಟೀರಿ ಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣ ಗಳನ್ನು ಹೊಂದಿರುತ್ತದೆ. ಬೇವಿನ ಬದಲು ಬೆಲ್ಲವನ್ನು ಬಳಕೆ ಮಾಡಬಹುದು. ನಿಮ್ಮ ಮಗುವಿನ ಬಾಯಿಗೆ ಸ್ವಲ್ಪ ಓಂಕಾಳುಗಳನ್ನು ಹಾಕಿ ಜೊತೆಗೆ ಸ್ವಲ್ಪ ಬೆಲ್ಲವನ್ನು ಹಾಕಿ ಜಗಿದು ತಿನ್ನಲು ಹೇಳಿ. ಇಲ್ಲಿ ಓಂಕಾಳುಗಳು ಕರುಳಿನ ಭಾಗದಲ್ಲಿ ಹುಳು ಗಳು ಬೆಳವಣಿಗೆ ಆಗದಂತೆ ತಡೆದರೆ, ಬೆಲ್ಲ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ನೀರಿಗೆ ಅರಿಶಿನ ಹಾಕಿ ಮಿಕ್ಸ್ ಮಾಡಿ ನಿಮ್ಮ ಮಗುವಿಗೆ ಕುಡಿಯಲು ಕೊಡಬೇಕು. ಇದರಿಂದ ಮಗುವಿನ ಹೊಟ್ಟೆಯಲ್ಲಿ ಇರುವಂತಹ ಹುಳುಗಳು ನಾಶವಾಗುತ್ತವೆ.ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆ ಅರಿಶಿನ ಹಾಕಿ ನಿಮ್ಮ ಮಗುವಿಗೆ ಐದು ದಿನಗಳ ವರೆಗೆ ಕುಡಿಯಲು ನೀಡಿದರೆ ಉತ್ತಮ.ಅರಿಶಿನ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣ ಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದು ಕರುಳಿನ ಭಾಗದ ಹುಳುಗಳಿಗೆ ಪರಿಣಾಮಕಾರಿಯಾದ ಔಷಧಿಯಾಗಿ ಕೆಲಸ ಮಾಡುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement