ಮಗುವಿಗೆ ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿದ ಅಜ್ಜಿ: ಸೊಸೆ ಆರೋಪ

ಗದಗ: ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಒಂಬತ್ತು ತಿಂಗಳ ಹಸುಗೂಸಿಗೆ ಎಲೆ, ಅಡಿಕೆ ತಿನ್ನಿಸಿ ಅಜ್ಜಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಈ ಘಟನೆ ನ. 22 ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ತಾಯಿ ನಾಗರತ್ನ ಅತ್ತೆ ಸರೋಜಾ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೆರಿಗೆಯಾದ 5 ತಿಂಗಳ ಬಳಿಕ ನಾಗರತ್ನ ಗಂಡನ ಮನೆಗೆ ಬಂದಿದ್ದರು. ಈ ವೇಳೆ ಅತ್ತೆ ಸರೋಜಾ “ಇಷ್ಟು ಬೇಗ ಮಗು ಬೇಕಿತ್ತಾ” ಅಂತ ಪ್ರಶ್ನೆ ಮಾಡಿದ್ದಾರೆ. ಇದೇ ಕೋಪದಲ್ಲಿ ಮಗುವಿಗೆ ಅಡಕೆ ಹೋಳು, ಎಲೆ ತಿನ್ನಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಮಗುವಿನ ಅಂತ್ಯಸಂಸ್ಕಾರ ನ.22ರಂದು ನೆರವೇರಿತ್ತು. ಈ ಬಳಿಕ ಮಗುವಿನ ತಾಯಿ ನಾಗರತ್ನ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ (ನ.24) ರಂದು ಶವ ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಗದಗ ಎಸಿ ವೆಂಕಟೇಶ‌ ನಾಯಕ್, ಸಿಪಿಐ ಎಸ್​ಎಸ್ ಬೀಳಗಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement