ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಅವರು ಮದುವೆಯಾಗದೇ ತಮ್ಮ ಮೊದಲ ಮಗುವಿನ ಬರುವಿಕೆಯ ನೀರಿಕ್ಷೆಯಲ್ಲಿದ್ದು, ಎಲ್ಲರಲ್ಲಿಯೂ ಮಗುವಿನ ತಂದೆ ಯಾರೆಂಬ ಪ್ರಶ್ನೆ ಮೂಡಿತ್ತು. ಇದೀಗ ಇದಕ್ಕೆಲ್ಲಾ ನಟಿ ಉತ್ತರಿಸಿದ್ದಾರೆ.
ನಟಿ ಇಲಿಯಾನಾ ಅವರು ತನ್ನ ಗೆಳೆಯನ ಜೊತೆಯಿರುವ ಫೋಟೋ ಹಂಚಿಕೊಂಡು, ತಾಯ್ತನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮದುವೆ ಆಗದೇ ಇದ್ದ ಇಲಿಯಾನಾ ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ ಎಂದು ಬರಹವನ್ನೂ ಬರೆದು ಪೋಸ್ಟ್ ಮಾಡಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್ ಎಂದು ನಟಿ ಪೋಸ್ಟ್ ಮಾಡಿದ್ದರು.
ಇನ್ನು ಮೊದಲ ಬಾರಿಗೆ ತನ್ನ ಸಂಗಾತಿ ಜೊತೆ ಮುಖವನ್ನು ಬಹಿರಂಗಪಡಿಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಲು ಅವರು ಉಂಗುರಗಳನ್ನು ತೋರಿಸಿದರು. ಈಗ ಮತ್ತೊಮ್ಮೆ ತನ್ನ ಮಗುವಿನ ತಂದೆಯೊಂದಿಗೆ ಬ್ಲರ್ ಚಿತ್ರವನ್ನು ಹಂಚಿಕೊಂಡಿದ್ದಾರೆ.