ಬೇಕಾಗುವ ಪದಾರ್ಥಗಳು…
- ಮಟನ್- ಒಂದು ಕೇಜಿ (ಚಿಕ್ಕ ತುಂಡುಗಳಾಗಿಸಿದ್ದು)
 - ಅಚ್ಚ ಖಾರದ ಮೆಣಸಿನಪುಡಿ- ಒಂದು ದೊಡ್ಡ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದೂವರೆ ಚಮಚ)
 - ಗರಂ ಮಸಾಲಾ ಪುಡಿ-ಒಂದು ದೊಡ್ಡ ಚಮಚ
 - ಕರಿಬೇವಿನ ಎಲೆಗಳು- ಸ್ವಲ್ಪ
 - ಅರಿಶಿನ ಪುಡಿ- ಸ್ವಲ್ಪ
 - ಹಸಿಮೆಣಸಿನ ಕಾಯಿ-ನಾಲ್ಕು (ಉದ್ದಕ್ಕೆ ಸೀಳಿದ್ದು)
 - ಕಾಳುಮೆಣಸಿನ ಪುಡಿ- ಮೂರು ದೊಡ್ಡಚಮಚ
 - ದನಿಯಾ ಪುಡಿ: ಒಂದು ದೊಡ್ಡ ಚಮಚ
 - ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಅರ್ಧ ದೊಡ್ಡ ಚಮಚ
 - ಎಣ್ಣೆ – ಸ್ವಲ್ಪ
 - ಉಪ್ಪು: ರುಚಿಗೆ ತಕ್ಕಷ್ಟು
 - ಮಾಡುವ ವಿಧಾನ…
- ಮಾಂಸದ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರೆಲ್ಲಾ ಹೊರಹೋಗುವಂತೆ ಬಸಿಯಿರಿ. ಇದಕ್ಕೆ ಅರಿಶಿನದ ಪುಡಿ ಹಚ್ಚಿ ಬದಿಗಿಡಿ.
 - ಸುಮಾರು ಹದಿನೈದು ನಿಮಿಷದ ಬಳಿಕ ಪ್ರೆಶರ್ ಕುಕ್ಕರ್ ನಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ದನಿಯಾ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ತಿರುವುತ್ತಾ ಹುರಿಯಿರಿ.
 - ಕೊಂಚ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಾಂಸದ ತುಂಡುಗಳನ್ನು ಹಾಕಿ ಕೆಲಕಾಲ ಹುರಿದು ಬಳಿಕ ಮುಚ್ಚಳ ಮುಚ್ಚಿ ಅತಿ ಕಡಿಮೆ ಉರಿಯಲ್ಲಿ ಸುಮಾರು ಹದಿನೈದು ನಿಮಿಷ ಬೇಯಲು ಬಿಡಿ.
 - ಇನ್ನೊಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕರಿಬೇವಿನ ಎಲೆ, ಹಸಿಮೆಣಸಿನಕಾಯಿ ಹಾಕಿ ಕಂದು ಬಣ್ಣವಾಗುವವರೆಗೆ ಹುರಿಯಿರಿ.
 - ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಹುರಿಯಿರಿ. ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಾಂಸದ ತುಂಡುಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 - ಚಿಕ್ಕ ಉರಿಯಲ್ಲಿಯೇ ನಡು ನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯನ್ನು ನಂದಿಸಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಮಟನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ.
 
 
				
															
                    
                    

































