ದೆಹಲಿ: ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಇದೇ 20ರಿಂದ ಜನವರಿ 5ರವರೆಗೆ ಮತದಾನ ಕೇಂದ್ರಗಳಲ್ಲಿ ಬದಲಾವಣೆ ಹಾಗೂ ಮತದಾರರ ಭಾವಚಿತ್ರ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಕರಡು ಮತದಾರರ ಪಟ್ಟಿಯನ್ನು ಜನವರಿ 6 ರಂದು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಜನವರಿ 8 ರಂದು ಪ್ರಕಟಿಸಲಾಗುವುದು. 18 ವರ್ಷ ತುಂಬಿದವರು ಜನವರಿ 1ರೊಳಗೆ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಿದೆ.