ಬೆಂಗಳೂರು: ಚಂದ್ರಯಾನ-3 ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಕಾಲಿಟ್ಟ ಹಲವು ದಿನಗಳ ಬಳಿಕ ವಿಕ್ರಮ್ ಮತ್ತೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡ್ ಆಗಿದೆ ಎಂದು ಇಸ್ರೋ ಹೇಳಿದೆ.
ವಿಕ್ರಮ್ ಲ್ಯಾಂಡರ್ ಚಂದ್ರಯಾನ-3 ಮಿಷನ್ ಉದ್ದೇಶಗಳನ್ನು ಮೀರಿದೆ ಹಾಗೂ ಯಶಸ್ವಿಯಾಗಿ ಹಾಪ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ಹೇಳಿದೆ.
ಆದೇಶದ ಮೇರೆಗೆ ಅದರ ಇಂಜಿನ್‌ಗಳು ಆರಂಭಗೊಂಡು ಅದು 40 ಸೆಂ.ಮೀ ಮೇಲಕ್ಕೆ ಹೋಗಿ ಸುರಕ್ಷಿತವಾಗಿ 30-40 ಸೆಂ.ಮೀ ದೂರದಲ್ಲಿ ಲ್ಯಾಂಡ್ ಆಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಈ ಸಾಧನೆಯು ಭವಿಷ್ಯದ ಯೋಜನೆಗಳಿಗೆ ಮತ್ತು ಮಾನವ ಮಿಷನ್‌ಗಳಿಗೆ ಪ್ರೇರಣೆಯಾಗಿದೆ. ಕಳೆದ ವಾರ ಚಂದ್ರಯಾನ-3 ಮಿಷನ್‌ನ ಪ್ರಜ್ಞಾನ ರೋವರ್ ಅನ್ನು”ಸ್ಲೀಪ್ ಮೂಡ್‌ನಲ್ಲಿರಿಸಲಾಯಿತು. ಆದರೆ ಇದೀಗ ಅದರ ಬ್ಯಾಟರಿಗಳು ಚಾರ್ಜ್ ಆಗುತ್ತಿವೆ ಹಾಗೂ ರಿಸೀವರ್ ಆನ್ ಆಗಿದೆ ಎಂದು ಇಸ್ರೋ ಹೇಳಿದೆ.
ಚಂದ್ರಯಾನ 3 ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಸಂಕ್ಷಿಪ್ತವಾಗಿ ಮೇಲೆತ್ತಲು ತನ್ನ ಇಂಜಿನ್‌ಗಳನ್ನು ಹಾರಿಸುವ ‘ಹೋಪಿಂಗ್’ ಪ್ರಯೋಗದ ನಂತರ ಚಂದ್ರನ ಮೇಲೆ ಎರಡನೇ ಬಾರಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ.