ಹೊಸದಿಲ್ಲಿ : ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿ ಪೈಶಾಚಿಕ ಕೃತ್ಯ ಎಸಗಿರುವುದಕ್ಕೆ ಇಡಿ ಪ್ರಪಂಚವೇ ನಲುಗಿ ಹೋಗಿದೆ. ಇಸ್ರೇಲ್ ಮೇಲೆ ದಾಳಿ ಮಾಡಿರುವ ಹಮಾಸ್ ಉಗ್ರರು ಚಿಕ್ಕ ಚಿಕ್ಕ ಮಕ್ಕಳು, ವೃದ್ಧರು ಹಾಗೂ ಹೆಣ್ಣುಮಕ್ಕಳೆನ್ನದೇ ಅತಿ ಹೀನ ಕೃತ್ಯ ನಡೆಸಿ ಮಾರಣ ಹೋಮ ನಡೆಸಿದೆ. ಹಮಾಸ್ ಉಗ್ರರ ನೀಚ ಕೃತ್ಯಕ್ಕೆ ಇಡಿ ವಿಶ್ವವೇ ಖಂಡನೆ ವ್ಯಕ್ತಪಡಿಸುತ್ತಿದೆ. ಈ ವೇಳೆ ಪ್ರಧಾನಿ ಮೋದಿ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಪ್ಯಾಲೇಸ್ತಿನ್‌ರ ಪರ ಬೆಂಬಲ ನೀಡಿ, ಪ್ಯಾಲೇಸ್ತಿನ್‌ರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದ್ದವು. ಈಗ ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತೆ ಪ್ಯಾಲೇಸ್ತಿನ್‌ರ ಪರ ಬ್ಯಾಟ್ ಬೀಸಿದ್ದಾರೆ. ‘ಇಸ್ರೇಲ್ ಯುದ್ಧಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ನಿಲುವು ಪರಿಪೂರ್ಣವಾಗಿಲ್ಲ. ಭಾರತವು ಪ್ಯಾಲೇಸ್ತಿನ್ ಜನತೆಯ ಪರವಾಗಿಯೂ ನಿಲ್ಲಬೇಕಾಗಿದೆ. ಪ್ಯಾಲೇಸ್ತಿನ್ ವಿಷಯವನ್ನು ದೇಶ ಮರೆಯಬಾರದು ಎಂದು ಹೇಳಿದ್ದಾರೆ.