ಚಿತ್ರದುರ್ಗ: 2020-21 ರಿಂದ 2023-24ನೇ ಸಾಲಿನ ಬಾಕಿ ಉಳಿದ ಕಾರ್ಯಕ್ರಮಗಳಿಗೆ ಮತ್ತು 2024-25ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೋಟಾರ್ ಸೈಕ್ ವಿತ್‌ಐಸ್ ಬಾಕ್ಸ್ ಘಟಕದಡಿ ನೀಡಿದ ಹೆಚ್ಚುವರಿ ಗುರಿಗಳಿಗೆ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಈ ಯೋಜನೆಯಡಿ 0.75 ಲಕ್ಷ ಘಟಕ ವೆಚ್ಚ ನಿಗಧಿಪಡಿಸಲಾಗಿದ್ದು, ಒಟ್ಟು 12 ಘಟಕಗಳನ್ನು ನಿರ್ಮಿಸಲು ಗುರಿ ಹೊಂದಿದ್ದು, ಮಹಿಳೆಯರಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ತಲಾ 5, ಪರಿಶಿಷ್ಟ ಜಾತಿಗೆ 2 ಘಟಕಗಳು ಮೀಸಲಿವೆ.
ಸಾಮಾನ್ಯ ವರ್ಗದವರಿಗೆ ಘಟಕ ವೆಚ್ಚದ ಶೇ.40 ರಷ್ಟು ಹಾಗೂ ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.60ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ಫಲಾನುಭವಿಗಳು ನಿಗದಿತ ಸಮಯದೊಳಗೆ ಅರ್ಜಿಗಳನ್ನು ಸಂಬAಧಿಸಿದ ತಾಲ್ಲೂಕಿನ ಮೀನಿಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮುರು ಮೀನುಗಾರಿಕೆ ಸಹಾಯಕ ನಿರ್ದೇಶಕ ತುಳಸೀದಾಸ್ ಅವರ ಮೊಬೈಲ್ ಸಂಖ್ಯೆ 9342187356, ಹಿರಿಯೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಎನ್.ಮಂಜುನಾಥ್ ಅವರ ಮೊಬೈಲ್ 7022933310 ಹಾಗೂ ಹೊಸದುರ್ಗ ಮತ್ತು ಹೊಳಲ್ಕೆರೆ ಮೀನುಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ವರ ಅವರ ಮೊಬೈಲ್ ಸಂಖ್ಯೆ 9945004235 ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.