ಇನ್ನುಮುಂದೆ ರಾಜ್ಯದ ಮದರಸಾಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಬೋಧನೆ ಮಾಡುವುದಕ್ಕೆ ಆದೇಶ ಹೊರಡಿಸಲು
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊಸ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಸಾವಿರಾರು ಮದರಸಾಗಳಿದ್ದು ಮುಸ್ಲಿಂ ವಿದ್ಯಾರ್ಥಿಗಳಿಗೆ ಬೋಧಕರು ಕನ್ನಡದಲ್ಲಿ ಪಾಠ ಮಾಡಲು,
ಕನ್ನಡ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರಾಧಿಕಾರ ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ
ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು. ಪ್ರಾಧಿಕಾರ ಆದೇಶ
ಹೊರಡಿಸಿದರೆ, ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಕನ್ನಡ ಕಲಿಯಲಿದ್ದಾರೆ.