ಕೇರಳ : 12 ಸೆಂಟ್ಸ್ ಜಮೀನು ಮತ್ತು ಮನೆ ಹೊಂದಿರುವ ಯುವಕನೊಬ್ಬ ತನಗೆ ಮದುವೆ ಯಾಗಲು ಹುಡುಗಿ ಹುಡುಕಿಕೊಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಮೆಟ್ಟಲೇರಿದ್ದಾನೆ.
ಕೇರಳದ ಕೊಲ್ಲಂ ಮಣ್ಣೂರಿನ ಉಣ್ಣಿಕುಣಿನ್ ಬಳಿಯ ಮೂಕುಲುವಿಲ್ಲಾ ನಿವಾಸಿಯಾಗಿರುವ ವಿಕಲಚೇತನ ಅನಿಲ್ ಜಾನ್ (32) ಎಂಬುವರು ದೂರಿನೊಂದಿಗೆ ಕೊಲ್ಲಂ ಕಡೈಕಲ್ ಪೊಲೀಸರಿಗೆ ಬಂದಿದ್ದರು. ಅನಾಥಾಶ್ರಮದವಳಾದರೂ ಅಡ್ಡಿಯಿಲ್ಲ ತನಗೆ ಹುಡುಗಿ ಹುಡುಕಿಕೊಡಿ ಎಂದು ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ತಂದೆ-ತಾಯಿ ತೀರಿಕೊಂಡ ನಂತರ ಅನಿಲ್ ಜಾನ್ ಒಂಟಿ ಜೀವನ ನಡೆಸುತ್ತಿದ್ದಾರೆ. ಒಂದು ಕಣ್ಣಿಗೆ ಸ್ವಲ್ಪ ದೃಷ್ಟಿ ದೋಷವಿರುವ ಅನಿಲ್ ಜಾನ್ ಪತ್ರಿಕೆಗಳನ್ನು ವಿತರಿಸುವುದು ಮತ್ತು ಲಾಟರಿ ಟಿಕೆಟ್ ಮಾರಾಟ ಮಾಡುವುದರ ಮೂಲಕ ತಮ್ಮ ಜೀವನವನ್ನು ಮುಂದುವರೆಸಿದ್ದಾರೆ. ತನಗೆ ಮದುವೆ ಮಾಡಿಕೊಡುವಂತೆ ಸ್ಥಳೀಯರು, ಸಂಬಂಧಿಕರು ಮತ್ತು ಚರ್ಚ್ ಸದಸ್ಯರನ್ನು ಕೇಳಿದರೂ ಯಾರೂ ಉಪಕ್ರಮವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಅನಿಲ್ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ತನಿಖೆಯಿಂದ ದೂರು ನಿಜ ಎಂಬುದು ದೃಢಪಟ್ಟಿದೆ. ಆದರೆ ಈ ವಿಚಾರದಲ್ಲಿ ಮದುವೆ ದಲ್ಲಾಳಿಗಳಿಗೆ ಹೇಳುವುದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎಂದು ಕಡಕಲ್ ಪೊಲೀಸ್ ಠಾಣಾಧಿಕಾರಿ ರಾಜೇಶ್ ಪ್ರತಿಕ್ರೀಯಿಸಿದ್ದಾರೆ.