ಮದುವೆ ಮನೆಯಲ್ಲಿ ಡಿಜೆ ಹಾಡಿಗಾಗಿ ಗಲಾಟೆ : ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು

WhatsApp
Telegram
Facebook
Twitter
LinkedIn
ಉತ್ತರ ಪ್ರದೇಶ:  ಮದುವೆ ಮನೆಯಲ್ಲಿ  ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು ತಮಾಷೆಯಿಂದ ಕೂಡಿದ ಸಮಾರಂಭವನ್ನು ಆಯೋಜಿಸುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್‌ ಆಗಿದೆ. ಸೇರಿದ ಜನರೆಲ್ಲ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಾರೆ. ಹೀಗೆ ಮದುವೆ ಮದುವೆಯಲ್ಲಿ ನೃತ್ಯ ಮಾಡುವ ವೇಳೆ ಡಿಜೆ ಹಾಡುಗಳಿಗಾಗಿ ಜಗಳವಾಡಿ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಮದುವೆ ಅಂದರೆ ಎಲ್ಲೆಡೆ ಸಂಭ್ರಮ ಮನೆಮಾಡಿರುತ್ತದೆ. ಆದರೆ ಲಕ್ನೋದಲ್ಲಿ ನಡೆದ ಮದುವೆಯಲ್ಲಿ ಡಿಜೆಗಾಗಿ ಕಿತ್ತಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಎರಡೂ ಕಡೆಯವರು ಪರಸ್ಪರ ಜಗಳವಾಡಿ, ಮದುವೆ ಮನೆಯಲ್ಲಿದ್ದ ಕುರ್ಚಿಗಳನ್ನು ಎಸೆದು ಕುಟುಂಬಸ್ಥರು ಹೊಡೆದಾಡಿಕೊಂಡಿರುವ ವಿಡಿಯೋ ನೋಡಿದ್ರೆ ಇವರು ಜಗಳವಾಡೋಕೆ ಬಂದ್ರಾ? ಅಥವಾ ಮದುವೆಗೆ ಬಂದ್ರಾ ಅನ್ನುವಂತಹ ಅನುಮಾನ ಮೂಡಿದೆ.
ಮದುವೆ ಮನೆಯಲ್ಲಿ ಮೊದಲು ಎರಡು ಕಡೆಯವರಿಗೆ ಊಟದ ವಿಚಾರವಾಗಿ ಜಗಳವಾಗಿದೆ. ನಂತರ ಆರತಕ್ಷತೆಗೆ ಸಿದ್ಧತೆಗಳು ನಡೆದಿದ್ದು, ವಧು-ವರ ಎಂಟ್ರಿಗೆ ಕುಟುಂಬಸ್ಥರು ನೃತ್ಯ ಮಾಡಿದ್ದಾರೆ. ಅದೇ ಸಮಯದಲ್ಲಿ ಡಿಜೆ ಹಾಡುಗಳಿಗಾಗಿ ಜಗಳವಾಗಿದೆ. ಇದರಿಂದ ಇನ್ನಷ್ಟು ಕೋಪಗೊಂಡು ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಮದುವೆಯಲ್ಲಿ ಜಗಳ ಶುರುವಾಗಿದೆ. ಕುಟುಂಬಸ್ಥರು ಮದುವೆ ಮನೆಯಲ್ಲಿದ್ದ ಕುರ್ಚಿಗಳನ್ನು ತಳ್ಳಿ ಹಾಕಿ ಅದರಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon