ರಾಮನಗರ: ಮದುವೆ ಸಮಾರಂಭದಲ್ಲಿ ಐಸ್ಕ್ರೀಂ ಸೇವಿಸಿ 80 ಜನರು ಅಸ್ವಸ್ಥಗೊಂಡಿರುವ ಘಟನೆ ಚನ್ನಪಟ್ಟಣದ ಟಿಪ್ಪುನಗರದಲ್ಲಿ ನಡೆದಿದೆ. ಅಸ್ವಸ್ಥಗೊಂಡ 80 ಜನರಲ್ಲಿ 50 ಜನರನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ಜನರನ್ನು ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥಗೊಂಡವರಲ್ಲಿ ಬಹುತೇಕರು ಮಕ್ಕಳಿದ್ದಾರೆ. ಮದುವೆ ಸಮಾರಂಭದಲ್ಲಿ ಊಟದ ಬಳಿಕ ಐಸ್ಕ್ರೀಂ ತಿಂದು ತಮ್ಮ ಊರುಗಳಿಗೆ ತೆರಳುತ್ತಿದ್ದರು. ದಾರಿ ಮಧ್ಯೆ ವಾಂತಿ, ಭೇದಿ ಶುರುವಾಗಿದೆ. ಸಮಾರಂಭದಲ್ಲಿ ಅವಧಿ ಮೀರಿದ ಐಸ್ಕ್ರೀಂ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಗಡಿಯ ವರ, ಚನ್ನಪಟ್ಟಣ ವಧು ನಡುವೆ ವಿವಾಹ ನಡೆದಿದೆ.