ಬೆಳಿಗ್ಗೆ ಎದ್ದ ತಕ್ಷಣ ನಾವು ಟೂತ್‌ಪೇಸ್ಟ್ ನಿಂದ (Tooth paste) ಹಲ್ಲುಜ್ಜುತ್ತೇವೆ. ಈ ಟೂತ್‌ಪೇಸ್ಟ್ ಬರೀ ಹಲ್ಲುಜ್ಜಲು ಉಪಯೋಗವಾಗುತ್ತದೆ ಎಂದು ನೀವು ಅಂದುಕೊಂಡಿರಬಹುದು. ಆದರೆ ಈ ಟೂತ್‌ಪೇಸ್ಟ್ ನಿಂದ ಹಲವು ವಸ್ತುಗಳು ಫಳಫಳ ಹೊಳೆಯುವಂತೆ ಮಾಡಬಹುದು.
ಸ್ಟೀಲ್ ಸಿಂಕ್ (steel sink) ಶುಚಿಗೊಳಿಸಬಹುದು : ಮನೆಯಲ್ಲಿನ ಸ್ಟೀಲ್ ಸಿಂಕ್ ಅನ್ನು ಸಹ ಟೂತ್‌ಪೇಸ್ಟ್ ನಿಂದ ಹೊಳೆಯುವಂತೆ ಮಾಡಬಹುದು. ಅಲ್ಲದೇ ಟ್ಯಾಪ್ ಗಳನ್ನು ಸಹ ಸ್ವಚ್ಛ (clean) ಮಾಡಬಹುದು. ಇದಕ್ಕಾಗಿ ಟ್ಯಾಪ್ ಮೇಲೆ ಟೂತ್‌ಪೇಸ್ಟ್ ಹಚ್ಚಿ, ಬಳಿಕ ಬಟ್ಟೆಯಿಂದ ಚೆನ್ನಾಗಿ ಉಜ್ಜಬೇಕು (rub it). ನಂತರ ಇದನ್ನು ನೀರಿನಿಂದ ತೊಳೆದರೆ, ಹೊಸದರಂತೆ ಕಾಣುತ್ತದೆ.
ಬಟ್ಟೆ ಮೇಲಿನ ಕಲೆ ಹೋಗಲಾಡಿಸಬಹುದು : ಕೆಲವೊಂದು ಸಲ ನಮ್ಮ ಕೈ ತಪ್ಪಿ ಬಟ್ಟೆ ಮೇಲೆ ಏನಾದರೂ ಬಿದ್ದು ಕಲೆಯಾಗಿರುತ್ತದೆ. ಬ್ರಷ್ ನಿಂದ ಎಷ್ಟು ಉಜ್ಜಿದರೂ ಈ ಹಠಮಾರಿ ಕಲೆ ಹೋಗುವುದಿಲ್ಲ. ನೀವು ಕಲೆಯಾಗಿರುವ ಜಾಗಕ್ಕೆ ಮಾತ್ರ ಟೂತ್‌ಪೇಸ್ಟ್ ಹಚ್ಚಿ, ಐದು ನಿಮಿಷಗಳ ಬಳಿಕ ಉಜ್ಜಿ. ನಂತರ ಉಗುರು ಬೆಚ್ಚಗಿನ ನೀರಿನಿಂದ (with lukewarm water) ತೊಳೆದರೆ, ಕಲೆ ನಿವಾರಣೆ ಆಗುತ್ತದೆ.
ಬೆಳ್ಳಿ ಆಭರಣಗಳನ್ನು ಸ್ವಚ್ಛ ಮಾಡಬಹುದು : ನಾವು ಧರಿಸುವ ಬೆಳ್ಳಿಯ ಆಭರಣಗಳು ತುಂಬಾ ಬೇಗ ಕಪ್ಪಾಗುತ್ತವೆ. ಕಪ್ಪಾಗಾಗಿರುವ ಬೆಳ್ಳಿಯ ಆಭರಣಗಳನ್ನು (silver jewellery) ಟೂತ್‌ಪೇಸ್ಟ್ ನಿಂದ ಶುಚಿಗೊಳಿಸಬಹುದು. ಬೆಳ್ಳಿ ಆಭರಣದ ಮೇಲೆ ಈ ಟೂತ್‌ಪೇಸ್ಟ್ ಅನ್ನು ಹಚ್ಚಬೇಕು (applied). ಬ್ರಷ್ ನಿಂದ ನಿಧಾನವಾಗಿ ಉಜ್ಜಬೇಕು. ನಂತರ ನೀರಿನಿಂದ ತೊಳೆದರೆ, ಆಭರಣಗಳು ಶುಚಿಯಾಗುತ್ತವೆ.
ಟೈಲ್ಸ್ ಸ್ವಚ್ಛ ಮಾಡಬಹುದು : ನೀವು ಬಾತ್ ರೂಂನಲ್ಲಿರುವ ಟೈಲ್ಸ್ ಕ್ಲೀನ್ ಮಾಡಲು ಟೂತ್ ಪೇಸ್ಟ್ ಅನ್ನು ಬಳಕೆ ಮಾಡಬಹುದು. ಮೊದಲು ಟೂತ್ ಪೇಸ್ಟ್ ಗೆ ಉಗುರು ಬೆಚ್ಚಗಿನ ನೀರನ್ನು ಸೇರಿಸಬೇಕು. ಟೈಲ್ಸ್ ಮೇಲೆ ಈ ಪೇಸ್ಟ್ ಅನ್ನು ಹಚ್ಚಿ, ಮೃದುವಾದ ಸ್ಕ್ರಬ್ (soft scrub) ನಿಂದ ಉಜ್ಜಿದರೆ ಟೈಲ್ಸ್ ಹೊಳೆಯುವಂತೆ ಸ್ವಚ್ಛವಾಗುತ್ತದೆ.
ಬಿಳಿ ಬಣ್ಣದ ಬೂಟು : ನೀವು ಬಿಳಿ ಬಣ್ಣದ ಬೂಟುಗಳಿಂದ (white shoes) ಕೊಳಕು ಕಲೆಗಳನ್ನು ಹೋಗಲಾಡಿಸಲು ಟೂತ್‌ಪೇಸ್ಟ್ ಅನ್ನು ಬಳಕೆ ಮಾಡಬಹುದು. ನಿಮಗೆ ಗೊತ್ತ.? ಇದು ಕ್ಲೀನರ್ ನಂತೆ ಶೂಗಳನ್ನು ಸ್ವಚ್ಛಗೊಳಿಸುತ್ತದೆ. ಮೊದಲು ಶೂಗಳ ಮೇಲೆ ಟೂತ್‌ಪೇಸ್ಟ್ ಹಚ್ಚಬೇಕು, ಬಳಿಕ ಬ್ರಷ್ ನಿಂದ ಸ್ಕ್ರಬ್ ಮಾಡಬೇಕು. ನಂತರ ಒದ್ದೆ ಬಟ್ಟೆಯಿಂದ ಶೂಗಳನ್ನು ಒರೆಸಬೇಕು.