ಛತ್ತೀಸ್‌ಗಢ: ರಾಯ್‌ಪುರ್‌ನಲ್ಲಿರುವ ವಸತಿ-ಕಮ್-ವಾಣಿಜ್ಯ ಕಟ್ಟಡದಲ್ಲಿ ಎಸಿ ಸ್ಪೋಟವಾಗಿದೆ. ಎಸಿ ಸ್ಫೋಟಗೊಂಡ ಪರಿಣಾಮ ಓರ್ವ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಹಾಗಾಗಿ ಎಸಿ ಸ್ಫೋಟದ ರಭಸಕ್ಕೆ ಕಚೇರಿಯ ಕಿಟಕಿಯೂ ಮುರಿದು ಬಿದ್ದಿದೆ. ಮೃತರನ್ನು ಮಸರತ್ ಖಾನ್ (26) ಮತ್ತು ಆರಿಫ್ ಮಂಜೂರ್ ಖಾನ್ (48) ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.