ಚಿಕನ್ ಕರಿಯನ್ನು ನಾವು ಬೇರೆ ಬೇರೆ ಸ್ಟೈಲ್‍ನಲ್ಲಿ ತಯಾರಿಸಿ ಸೇವಿಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಮಾಂಸದ ಅಡುಗೆ ಸಖತ್ ಸರಳವಾಗಿದೆ ಮತ್ತು ಅಷ್ಟೇ ರುಚಿಯಾಗಿಯೂ ಇರುತ್ತದೆ. ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.
ಈ ಕರಿಯನ್ನು ಚಪಾತಿ, ಅನ್ನ ಹಾಗೂ ರಾಗಿ ಮುದ್ದೆಯೊಂದಿಗೂ ಸವಿಯಬಹುದು. ನೀವು ಮನೆಯಲ್ಲಿ ಸುಲಭ ಹಾಗೂ ಸರಳ ವಿಧಾನದಲ್ಲಿ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯೊಂದಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ.
ಮಾಡುವ ವಿಧಾನ:
- ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಳಸದೆ ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿದುಕೊಳ್ಳಬೇಕು. ಸಂಪೂರ್ಣವಾಗಿ ಆರಿದ ಬಳಿಕ ಮಿಕ್ಸರ್ ಪಾತ್ರೆಗೆ ಸೇರಿಸಿ ರುಬ್ಬಿಕೊಳ್ಳಬೇಕು.
- ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
- ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಈರುಳ್ಳಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಉಪ್ಪನ್ನು ಸೇರಿಸಿ, 15 ನಿಮಿಷಗಳ ಕಾಲ ಬೇಯಿಸಬೇಕು.
- ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆ, ಈರುಳ್ಳಿ, ತೆಂಗಿನ ತುರಿ, ಜೀರಿಗೆ ಉಳಿದ ಮಸಾಲೆ ಸಾಮಾಗ್ರಿಯನ್ನು ಸೇರಿಸಿ ಸ್ವಲ್ಪ ಬೇಯುವವರೆಗೆ ಹುರಿಯಬೇಕು.
- ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆಯೇ 2 ನಿಮಿಷಗಳ ಕಾಲ ಹಿರಿಯಿರಿ. ನಂತರ ದಾಲ್ಚಿನ್ನಿ ಮತ್ತು ಲವಂಗದೊಂದಿಗೆ ಮಿಕ್ಸರ್ ಪಾತ್ರೆಗೆ ಸೇರಿಸಿ, ಪುಡಿ ಮಾಡಬೇಕು.
- ನಂತರ ಕೋಳಿ ಮಾಂಸ ಇರುವ ಪಾತ್ರೆಗೆ ಈ ಮೊದಲೆ ತಯಾರಿಸಿದ ರುಬ್ಬಿದ ಮಸಾಲೆ, ಮತ್ತು ಹುರಿದಿಟ್ಟ ಇರುಳ್ಳಿ, ಅರಿಶಿಣ, ಏಲಕ್ಕಿ, ಕೆಂಪುಮೆಣಸು ಕೊತ್ತಂಬರಿ ಸೇರಿಸಿ ಚೆನ್ನಾಗಿ ಬೇಯಿಸಿದರೆ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.