ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡುವ ಸುಲಭ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಕಡ್ಲೆಹಿಟ್ಟು – ಒಂದೂವರೆ ಕಪ್ಅಕ್ಕಿಹಿಟ್ಟು – 1 ಕಪ್ಖಾರದ ಪುಡಿ – 2 ಚಮಚಕೊತ್ತಂಬರಿ ಸೊಪ್ಪು- ಸ್ವಲ್ಪಎಳ್ಳು – 2 ಚಮಚಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ- ಸ್ವಲ್ಪ (ಕರಿಯಲು)ಬ್ರೆಡ್ ಸ್ಲೈಸ್ – 6 (ನಿಮಗೆ ಬೇಕಾದಷ್ಟು ಆಗ ಸ್ವಲ್ಪ ಸಾಮಾಗ್ರಿಗಳ ಅಳತೆ ಜಾಸ್ತಿ ಮಾಡಬೇಕು)
ಮಾಡುವ ವಿಧಾನ
ಒಂದು ಬೌಲ್ಗೆ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ನೀರು ಹಾಕಿ ಕಲಸಿಕೊಳ್ಳಿ.ಹಿಟ್ಟು ತೀರಾ ತೆಳುವಾಗಿರಬಾರದು, ಸ್ವಲ್ಪ ಗಟ್ಟಿಯಾಗಿರುವಂತೆ ಕಲಸಬೇಕುನಂತರ ಬ್ರೆಡ್ ಸ್ಲೈಸ್ನ 2 ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಾಕಿ. ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.ಸಾಸ್ ಅಥವಾ ಕೆಚಪ್ ಜೊತೆ ಸವಿಯಲು ಮಸಾಲಾ ಬ್ರೆಡ್ ರೆಡಿ