ಪ್ರತಿ ತಿಂಗಳು ಮನೆಯ ಯಜಮಾನಿಗೆ ಖಾತೆಗೆ 2000 ರೂಪಾಯಿಯನ್ನ ಸರ್ಕಾರದಿಂದ ಜಮಾ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಹಣ ಪಡೆಯುವ ಮಹಿಳೆ ಮೃತಪಟ್ಟರೆ ಆ ಹಣ ಯಾರ ಖಾತೆಗೆ ಜಮಾ ಆಗಲಿದೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ.
ಒಂದು ವೇಳೆ ಗೃಹಲಕ್ಷ್ಮಿ, ಫಲಾನುಭವಿಯಾದ ಮನೆ ಯಜಮಾನಿ ಮೃತಪಟ್ಟಿದ್ದರೆ ಆಕೆಯ ಕುಟುಂಬದ ಹಿರಿಯ ಸೊಸೆ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯ ಜಾಗದಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಅವರಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.