ಮನೆ ಬಾಗಿಲಿಗೆ ಡಾಕ್ಟರ್‌: ಗೃಹ ಆರೋಗ್ಯ ಯೋಜನೆ, ಗೃಹ ಆರೋಗ್ಯ ಜಾರಿ: ಮನೆಮನೆಗೆ ಔಷಧ ಪೆಟ್ಟಿಗೆ

ಉತ್ತಮ ಆರೋಗ್ಯದ ಅನ್ವೇಷಣೆಯು ಮೂಲಭೂತ ಹಕ್ಕು, ಮತ್ತು ಈ ತತ್ವಕ್ಕೆ ಕರ್ನಾಟಕದ ಬದ್ಧತೆಯು ಅದರ ದೃಢವಾದ ಗೃಹ ಆರೋಗ್ಯ ಜಾರಿ ಉಪಕ್ರಮಗಳ ಮೂಲಕ ಸ್ಪಷ್ಟವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ನಿಮ್ಮ ಮನೆಯ ಸೌಕರ್ಯದಲ್ಲಿಯೂ ಸಹ ಆರೋಗ್ಯ ಸೇವೆಯು ರಾಜ್ಯದ ಮೂಲೆ ಮೂಲೆಯನ್ನು ತಲುಪುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ‘ಗೃಹ ಆರೋಗ್ಯ’ ಯೋಜನೆಯಡಿ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ.

Advertisement

ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ತಲಾ 90 ಮಾತ್ರೆಗಳನ್ನು ಒಳಗೊಂಡ ಮಾದರಿ ಔಷಧ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿದೆ. ಮನೆ ಮನೆ ಆರೋಗ್ಯ ತಪಾಸಣೆ ವೇಳೆ ಸಮಸ್ಯೆ ದೃಢಪಟ್ಟಲ್ಲಿ ಹಾಗೂ ಈಗಾಗಲೇ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಪೆಟ್ಟಿಗೆಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮೊದಲ ಬಾರಿಗೆ ನೀಡಿದ ಮಾತ್ರೆಗಳು ಖಾಲಿಯಾದ ಬಳಿಕ ಮತ್ತೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ತಲುಪಿಸಲಾಗುತ್ತದೆ. 30 ವರ್ಷ ಮೇಲ್ಪಟ್ಟವರು ಈ ಮಾತ್ರೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತಲಾ ಮೂರು ಮಾದರಿಯ ಮಾತ್ರೆಗಳನ್ನು ಸರ್ಕಾರ ಗುರುತಿಸಿದೆ. ಆ ಮಾತ್ರೆಗಳನ್ನು ಮಾತ್ರ ನೀಡಲಾಗುವುದು.

₹64 ಕೋಟಿ ಮೊತ್ತದ ಔಷಧ ಖರೀದಿ ಸೇರಿ ಒಟ್ಟು ₹82 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧ ಖರೀದಿಸಿ, ವಿತರಿಸಲಾಗುವುದು. ‌ಔಷಧ ಪಡೆದ ವ್ಯಕ್ತಿಯ ಹೆಸರು ಹಾಗೂ ವಿವರವನ್ನು ಪೆಟ್ಟಿಗೆಯ ಮೇಲೆ ನಮೂದಿಸಲಾಗುತ್ತದೆ. ಅದೇ ರೀತಿ, ಅವರ ಆರೋಗ್ಯ ಸ್ಥಿತಿಗತಿಯ ಮಾಹಿತಿ, ಔಷಧ ವಿತರಿಸಿದ ವಿವರವನ್ನು ಇಲಾಖೆಯೂ ದಾಖಲಿಸಿಕೊಳ್ಳಲಿದೆ.

ತಪಾಸಣಾ ತಂಡವು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ತಲಾ 20 ಮನೆಗಳಿಗೆ ಭೇಟಿ ನೀಡಲಿದೆ. ಮನೆ ಮನೆ ಭೇಟಿ ವೇಳೆ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಪತ್ತೆಗೂ ತಪಾಸಣೆ ನಡೆಸಲಾಗುವುದು. ಕ್ಯಾನ್ಸರ್ ದೃಢಪಟ್ಟಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಭೇಟಿ ಸಂದರ್ಭದಲ್ಲಿ ಮನೆಯ ಸದಸ್ಯರು ಇರದಿದ್ದಲ್ಲಿ ತಂಡವು ಮರುದಿನ ಮತ್ತೆ ಭೇಟಿ ನೀಡಲಿದೆ.

ತಪಾಸಣೆ ಬಗ್ಗೆ ತರಬೇತಿ: ಮನೆ ಮನೆ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ), ಜಿಲ್ಲಾ ಕಣ್ಗಾವಲು ಅಧಿಕಾರಿಗಳಿಗೆ (ಡಿಎಸ್‌ಒ) ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತದೆ. ಇವರು ಜಿಲ್ಲೆಗಳಲ್ಲಿ ಸಭೆ ನಡೆಸಿ, ವೈದ್ಯಾಧಿಕಾರಿಗಳಿಗೆ ತರಬೇತಿ ಕೊಡಬೇಕಾಗುತ್ತದೆ. ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿ ಮುಖ್ಯ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರಿಗೆ ತರಬೇತಿ ನೀಡುತ್ತಾರೆ. ‘ಔಷಧ ಖರೀದಿಗೆ ಸರ್ಕಾರದಿಂದ ಅನುಮೋದನೆ ದೊರೆತ ಬಳಿಕ, ತಪಾಸಣೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ನಂತರ ಔಷಧ ಪೆಟ್ಟಿಗೆಯೊಂದಿಗೆ ತಂಡವು ಮನೆ ಮನೆಗೆ ಭೇಟಿ ನೀಡಲಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವುದರಿಂದ ಮುಂದಾಗುವ ಅಪಾಯ ತಡೆಯಲು ಸಾಧ್ಯ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಯಡಿ ವಿತರಿಸಲಾಗುವ ಮಾದರಿ ಔಷಧ ಪೆಟ್ಟಿಗೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವಗೃಹ ಆರೋಗ್ಯ ಯೋಜನೆಯಡಿ ಉಚಿತವಾಗಿ ಔಷಧಗಳನ್ನು ಒದಗಿಸಲಾಗುತ್ತದೆ. ಈ ವರ್ಷ ಎಂಟು ಜಿಲ್ಲೆಗಳಲ್ಲಿ ಪ್ರಾರಂಭಿಸಿ ಮುಂದಿನ ವರ್ಷ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ

ಮನೆಗಳಿಗೆ ಸ್ಟಿಕರ್

ಯೋಜನೆಯಡಿ ಮನೆಗಳಿಗೆ ಭೇಟಿ ನೀಡುವ ತಪಾಸಣಾ ತಂಡಗಳು ಭೇಟಿ ದೃಢಪಡಿಸಲು ಮನೆಗಳಿಗೆ ಸ್ಟಿಕರ್‌ಗಳನ್ನು ಅಂಟಿಸಲಿವೆ. ಈಗಾಗಲೇ ಮಾದರಿ ಸ್ಟಿಕರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಸ್ಟಿಕರ್‌ನಲ್ಲಿ ಜಾಗೃತಿ ಸಂದೇಶ ಯೋಜನೆಯ ಬಗ್ಗೆ ವಿವರ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಭಾವಚಿತ್ರ ಇರಲಿವೆ.

ಯಾವೆಲ್ಲ ಜಿಲ್ಲೆಗಳಲ್ಲಿ ಜಾರಿ?

ರಾಮನಗರ ತುಮಕೂರು ಬೆಳಗಾವಿ ಗದಗ ಬಳ್ಳಾರಿ ಯಾದಗಿರಿ ದಕ್ಷಿಣ ಕನ್ನಡ ಮೈಸೂರು ಸರ್ಕಾರ ನಿಗದಿಪಡಿಸಿದ ಮಾತ್ರೆ ಅಧಿಕ ರಕ್ತದೊತ್ತಡಕ್ಕೆ: ಎಮ್ಲೋಡಿಪೈನ್ 5 ಎಂಜಿ ಟೆಲ್ಮಿಸಾರ್ಟನ್ 40 ಎಂಜಿ ಕ್ಲೋರ್ತಲಿಡೋನ್ 12.5 ಎಂಜಿ ಮಧುಮೇಹಕ್ಕೆ: ಮೆಟ್‌ಫಾರ್ಮಿನ್ ಎಸ್‌ಆರ್ 500 ಎಂಜಿ ಮೆಟ್‌ಫಾರ್ಮಿನ್ ಎಸ್‌ಆರ್ 100 ಎಂಜಿ ಗ್ಲಿಮಿಪ್ರೈಡ್ 1 ಎಂಜಿ

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement