ನಿದ್ರಾ ಪಾರ್ಶ್ವವಾಯು ಒಂದು ರೀತಿಯ ನಿದ್ರಾಹೀನತೆಯಿಂದ ಬರುವ ಸಮಸ್ಯೆಯಾಗಿದೆ.
ನೀವು ನಿದ್ರಿಸುವಾಗ ನಿಮ್ಮ ಆತ್ಮ ಹೊರಟುಹೋದಂತೆ ಮತ್ತು ನಿಮ್ಮ ಕೈಗಳು ಮತ್ತು ಕಾಲುಗಳು ಚಲನೆ ಕಳೆದುಕೊಂಡಂತೆ ಭಾಸವಾಗುತ್ತದೆ. ಇದನ್ನೇ ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ.
ಸರಳವಾಗಿ ಹೇಳುವುದಾದರೆ, ನಿಮ್ಮ ಮನಸ್ಸು ಎಚ್ಚರವಾಗಿದ್ದು, ನಿಮ್ಮ ದೇಹವು ನಿದ್ರಿಸುತ್ತಿರುತ್ತದೆ. ಸಮಸ್ಯೆ ಹೆಚ್ಚಾಗಿ ಈ ಯುವ ಪೀಳಿಗೆಯಲ್ಲಿ ಕಂಡುಬರುತ್ತದೆ.
ಆಳವಾದ ನಿದ್ರೆಗೆ ಹೋಗುವ ಮೊದಲು ಇದು ಸಂಭವಿಸುತ್ತದೆ.