ನವದೆಹಲಿ: ದೇಶ ಬಿಟ್ಟು ಪರಾರಿಯಾಗಿರುವ ವಂಚಕರಾದ ಉದ್ಯಮಿ ವಿಜಯ ಮಲ್ಯ, ನೀರವ್ ಮೋದಿ ಅವರನ್ನು ದೇಶಕ್ಕೆ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿದೆ.
ಸಿಬಿಐ, ಇ.ಡಿ. ಮತ್ತು ಎನ್ಐಎ ಅಧಿಕಾರಿಗಳು ಒಳಗೊಂಡ ಜಂಟಿ ತನಿಖಾ ಸಂಸ್ಥೆಗಳ ಅಧಿಕಾರಿಗಳ ತಂಡ ಯುನೈಟೆಡ್ ಕಿಂಗ್ಡಮ್ಗೆ ಭೇಟಿ ನೀಡಲಿದೆ.
ಮಲ್ಯ, ನೀರವ್ ಗಡಿಪಾರು ಬಗ್ಗೆ ಅಲ್ಲಿನ ಅಧಿಕಾರಿಗಳ ಜತೆಗೆ ಚರ್ಚಿಸುವ ಸಾಧ್ಯತೆಗಳಿವೆ. ವಿದೇಶಾಂಗ ಖಾತೆ ಸಹಕಾರದೊಂದಿಗೆ ಈ ಪ್ರಕ್ರಿಯೆಗಳು ನಡೆಯಲಿವೆ.