ಮಳೆಯ ನಕ್ಷತ್ರಗಳ ಬಗ್ಗೆ ಪೂರ್ವಜರ ಗಾದೆಮಾತುಗಳ ಪಟ್ಟಿ ಇಲ್ಲಿದೆ.!

 

 

ಬೆಂಗಳೂರು: ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ.

Advertisement

 

ಅಶ್ವಿನಿ

ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು,

 

ಅಶ್ವಿನಿ ಸಸ್ಯ ನಾಶಿನೀ,

 

ಅಶ್ವಿನಿ ಸನ್ಯಾಸಿಸಿ

 

ಅಶ್ವಿನಿ ಆದ್ರೆ ಶಿಶುವಿಗೆ ಹಾಲಿಲ್ಲ

 

ಭರಣಿ

 

ಭರಣಿ ಮಳೆ ಧರಣಿ ಬೆಳೆ

 

ಬರಿಣಿ ಬಂದ್ರ ದರಿಣಿ ಬೆಳೀತದ, ಭರಣಿ ಸುರಿದರೆ ಧರಣಿ ಬದುಕೀತು,

 

ಭರಣೀ ಬಂದರೆ ಧರಣಿ ತಣಿಯುತ್ತೆ.

 

ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,

 

ಭರಣಿ ಬಂದ್ರೆ ಧರಣಿ ಎಲ್ಲಾ ಹಸಿರು.

 

ಭರಣಿ ಮಳೆ ಧರಣಿ ತಂಪು ಭರಣಿ ಮಳೆ ಧರಣಿ ಎಲ್ಲಾ ಆಳು

 

ಕೃತಿಕಾ-

 

ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

 

ರೋಹಿಣಿ-

 

ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

 

ರೋಹಿಣಿ ಮಳೆಗೆ ಓಣೆಲ್ಲಾ ಜೋಳ

 

ಕೃತಿಕಾ-

 

ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

 

ರೋಹಿಣಿ-

 

ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

 

ರೋಹಿಣಿ ಮಳೆಗೆ ಓಣ್ಯಲ್ಲಾ ಜೋಳ

 

ಮೃಗಶಿರ –

 

ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು.

 

ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು.

 

ಮ್ರಗಶಿರ ಮಿಂಚಿದರೆ ಮೂರು ಮಳೆ ಇಲ್ಲ.

 

ಆರಿದ್ರಾ-

 

ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ

 

ಆಗಲ್ಲ,

 

ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ!

 

ಆರಿದ್ರಾ ಮಳೆ ಆರದೆ ಹುಯ್ಯುತ್ತೇ,

 

ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

 

ಆರಿದ್ರೆಯಲಿ ಗಿಡ ಆದರೆ ಆದಿತು..

 

ಪುನರ್ವಸು –

 

ಪುನರ್ವಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು.

 

 

ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)

 

ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು..

 

ಆಶ್ಲೇಷ-

 

ಆಲ್ಲೆ ಮಳೆ ಭೂಮಿ ಹಸ್ತುಗಟ್ಟಂಗೆ ಹುಯ್ತದೆ,

 

ಅಸಲೆ ಮಳೆ ಕೈತುಂಬಾ ಬೆಳೆ,

 

ಆಶ್ಲೇಷ ಮಳೆ ಈಸಲಾರದ ಹೊಳೆ.

 

ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.

 

ಅಸ್ಥೆ ಮಳೆಗೆ ಸಸ್ಥೆ ಬೆಟ್ಟಕ್ಕೆ ನೆಗೀತು ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ.

 

ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ ನಂಜಿನ ಮಳೆ.

 

ಅಲ್ಲೆ ಮಳೆ ಹುಯ್ಯಾಲಿ, ಸೋಸಲು ಗಟ್ಟ ಹತ್ತಾಲಿ

 

ಮಘ-

 

ಬಂದರೆ ಮಗೆ ಹೋದರೆ ಹೊಗೆ,

 

ಬಂದರೆ ಮಘ ಇಲ್ಲದಿದ್ದರೆ ಧಗೆ,

 

ಮಘ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

 

ಮಗೆ ಮಳೆ ಮಗೆ ಗಾತ್ರ ಬೀಳದೆ.

 

ಮಘ ಮೊಗೆಬೆಳೆಯುವ ಮಳೆ..

 

ಮಘಮಳೆ ಮೊಗೆದು ಹೊಯ್ಯುವುದು.

 

ಹುಬ್ಬ-

 

ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.

 

ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ..

 

ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ದಾಂಗೆ.

 

ಹುಬೆ ಮಳೆ ಉಬುಬೊಂಡು ಹೊಡೆ.

 

 

ಉತ್ತರೆ-

 

ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.

 

ಉತ್ತರ ಎದುರುತ್ತರದ ಮಳೆ.

 

ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ.

 

ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ

 

ಹಸ್ತ-

 

ಹಸ್ತ ಇಲ್ಲಿದ್ರೆ ಒಕ್ಕಲಿಗ ಹಲ್ಲು ಕಿಸ್ತ

 

ಹಸ್ತಾ ಭಾರಿಸಿದರೆ ಅಷ್ಟೇ..

 

ಹಸ್ತ ಮಳೆ ಎಂದಾದ್ರೂ ಬರುತ್ತೆ

 

ಚಿತ್ತೆ

ಕುರುಡು ಚಿತ್ತೆ ಎರಚಿದತ್ತ ಬೆಳೆ.

 

ಚಿತ್ತಾ ಮಳೆ ವಿಚಿತ್ರ ಬೆಳೆ!

 

ಚಿತ್ತಾ ಚಿತ್ರವಿಚಿತ್ರ ಮಳೆ..

 

ಕುರ್ಡು ಚಿತ್ತೆ ಎತ್ತಾಗ ಬಿದ್ದರೂ ಬರುತ್ತೆ.

 

ಸ್ವಾತಿ-

 

ಸ್ವಾತಿ ಮಳೆ ಮುತ್ತಿನ ಬೆಳೆ.

 

ಸ್ವಾತಿ ಮಳೆ ಹೇತೆನೆಂದ್ರೂ ಬಿಡದು.

 

ಸ್ವಾತಿ ಮುತ್ತಿನ ಹನಿಯ ಮಳೆ..

 

ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ

 

 

ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

 

ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ.

 

ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement