ಮಹಾರಾಷ್ಟ್ರ : ರೈಲು ಹಳಿಗಳ ಮೇಲೆ ಮಲಗಿ ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಭಯಂದರ್ ರೈಲ್ವೇ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ.
ರೈಲ್ವೇ ನಿಲ್ದಾಣಕ್ಕೆ ಬಂದ ಅಪ್ಪ-ಮಗ ರೈಲು ಚಲಿಸುತ್ತಿದ್ದ ಹಳಿಯ ಮೇಲೆ ಕೈ ಕೈ ಹಿಡಿದುಕೊಂಡು ಮಲಗಿದ್ದಾರೆ. ಪರಿಣಾಮ ಇಬ್ಬರು ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಹರೀಶ್ ಮೆಹ್ತಾ (60), ಜಯ್ (35) ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ.
ಇವರಿಬ್ಬರು ವಸೈನ ನಿವಾಸಿಗಳು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
भाईंदर रेल्वे स्थानकाजवळ पिता पुत्राने धावत्या लोकल ट्रेनखाली उडी मारून आत्महत्या गेली. सोमवारी सकाळी साडेअकराच्या सुमारास ही घटना घडली. हरिष मेहता (६०) आणि जय मेहता (३०) अशी त्यांची नावे आहेत. त्यांनी आत्महत्या का केली याचा तपास वसई रेल्वे पोलीस करत आहेत. pic.twitter.com/kzXtPPWbHa
— LoksattaLive (@LoksattaLive) July 9, 2024
ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಒಟ್ಟಿಗೆ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ನಲ್ಲಿ ನಡೆದುಕೊಂಡು ಹೋಗುವ ಅವರು, ಇದ್ದಕ್ಕಿಂದ್ದಂತೆ ಹಳಿಗೆ ಎರಡು ಬಾರಿ ಎಂಟ್ರಿ ನೀಡುತ್ತಾರೆ. ಕೊನೆಗೆ ಎದುರಿನಿಂದ ಬರುತ್ತಿದ್ದ ಟ್ರೈನ್ಗೆ ಅಡ್ಡ ಮಲಗಿ ಸಾವನ್ನಪ್ಪಿದ್ದಾರೆ.