ಮಹಾಶಿವರಾತ್ರಿ ಮಹೋತ್ಸವ: ಕೆಟ್ಟಿರುವ ಮಾನವನ ಮನಸ್ಸಿಗೆ ಸಂಸ್ಕಾರ ಬೇಕಾಗಿದೆ: ಕಬೀರಾನಂದಾಶ್ರಮದ ಶ್ರೀ.!

 

ಚಿತ್ರದುರ್ಗ : ಕೆಟ್ಟಿರುವ ಮಾನವನ ಮನಸ್ಸಿಗೆ ಸಂಸ್ಕಾರ ಬೇಕಾಗಿದೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಹೇಳಿದರು.

ಕಬೀರಾನಂದಾಶ್ರಮದಲ್ಲಿ ಇಂದಿನಿಂದ 9 ರವರೆಗೆ ಆರು ದಿನಗಳ ಕಾಲ ನಡೆಯುವ 94 ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಆಶ್ರಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಲಿಂಗಾನಂದ ಮಹಾಸ್ವಾಮಿಗಳು ಮೊಬೈಲ್ ಯುಗದಲ್ಲಿ ಮಕ್ಕಳಲ್ಲಿ ಸಂಸ್ಕøತಿ ಸಂಸ್ಕಾರ ಇಲ್ಲದಂತಾಗಿದೆ. ಸನಾತನ ಧರ್ಮ ನಮ್ಮದು. ಪರಶಿವನನ್ನು ರಾತ್ರಿಯಿಡಿ ಧ್ಯಾನಿಸುವುದೇ ಮಹಾಶಿವರಾತ್ರಿಯ ಮಹತ್ವ. 1924 ರಿಂದಲೂ ಕಬೀರಾನಂದಾಶ್ರಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಶಿವರಾತ್ರಿ ಎಂದರೆ ಕಬೀರಾನಂದಶ್ರಮ, ನವರಾತ್ರಿ ಎಂದರೆ ಮುರುಘಾಮಠ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಎರಡು ಮಠಗಳು ಪ್ರಸಿದ್ದಿ ಪಡೆದಿವೆ. ಈ ಬಾರಿಯ ಮಹಾಶಿವರಾತ್ರಿ ಮಹೋತ್ಸವಕ್ಕೆ ಬಹಳಷ್ಟು ಜನರ ಸಹಕಾರವಿದೆ. ಯುವ ಬಳಗ ಹೆಚ್ಚಿನ ಸಂಖ್ಯೆಯಲ್ಲಿದೆ. ಹೊಸ ಹೊಸ ಸ್ವಾಮಿಗಳನ್ನು ಮಹಾಶಿವರಾತ್ರಿ ಮಹೋತ್ಸವಕ್ಕೆ ಆಹ್ವಾನಿಸಿದ್ದೇವೆ. ಮನರಂಜನೆ, ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಇರುತ್ತದೆ ಎಂದು ತಿಳಿಸಿದರು.

Advertisement

ಮಹಾಶಿವರಾತ್ರಿ ಮಹೋತ್ಸವದ ಮೊದಲ ದಿನದಂದು ಸಂಜೆ 6-30 ಕ್ಕೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಹುಬ್ಬಳ್ಳಿ ವಿಜಯಪುರ ಶಾಂತಾಶ್ರಮದ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು, ಜಡೇಶ್ವರ ಮಠದ ರಾಮಾನಂದ ಭಾರತಿ ಸ್ವಾಮಿಗಳು, ಬಾಗಲಕೋಟೆ ಅರಿಕೆರೆಯ ಕೌಧೀಶ್ವರ ಮಹಾಸಂಸ್ಥಾನದ ಮಾಧವಾನಂದ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಭಾ ಮಂಟಪ ಉದ್ಘಾಟಿಸುವರು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಹಾ ಶಿವರಾತ್ರಿ ಮಹೋತ್ಸವ ಉದ್ಗಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರುಗಳಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ನಿವೃತ್ತ ಐ.ಎ.ಎಸ್.ಅಧಿಕಾರಿ ಬಿ.ಭೀಮಯ್ಯ, ಬಿಜೆಪಿ.ಮುಖಂಡ ಲಿಂಗಮೂರ್ತಿ, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಆರ್. ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ವಾಣಿಜ್ಯೋದ್ಯಮಿ ರೇವಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಸೋಮಶೇಖರ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಉದ್ಯಮಿ ಎಂ.ಎ.ಸೇತೂರಾಂ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡರು ಆಗಮಿಸಲಿದ್ದಾರೆಂದು ಹೇಳಿದರು.

ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷ ಕೆ.ಸಿ.ನಾಗರಾಜ್, ಪರಮೇಶ್, ವಿ.ಎಲ್.ಪ್ರಶಾಂತ್, ಡಿ.ಗೋಪಾಲಸ್ವಾಮಿ ನಾಯಕ, ನಾಗರಾಜ್ ಸಂಗಂ, ನ್ಯಾಯವಾದಿ ಪ್ರತಾಪ್ಜೋಗಿ, ಓಂಕಾರ್ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement