ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಭಾಗವಾಗಿ ಇಂದು ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನಾ 3 ಗಂಟೆ 30 ನಿಮಿಷಕ್ಕೆ ಇಂದಿನ ಪಂದ್ಯ ಆರಂಭವಾಗಲಿದೆ. ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ 2ನೇ ಪಂದ್ಯವನ್ನು ಆಡಲಿದೆ. ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಆರಂಭಿಕ ಪಂದ್ಯವಾಡಿರುವ ಟೀಂ ಇಂಡಿಯಾ ಸೋಲು ಕಂಡಿದೆ. ಇನ್ನು ಪಾಕಿಸ್ತಾನ ತಂಡದ ನೇತೃತ್ವ ಫಾತಿಮಾ ಸನಾ ವಹಿಸಲಿದ್ದಾರೆ. ಶ್ರೀಲಂಕಾ ವಿರುದ್ಧ ಕಣಕ್ಕೆ ಇಳಿದಿದ್ದ ಪಾಕಿಸ್ತಾನ ಕೂಡ 31 ರನ್ಗಳಿಂದ ಸೋಲು ಕಂಡಿದೆ. ಹೀಗಾಗಿ ಇವತ್ತಿನ ಪಂದ್ಯ ಎರಡು ತಂಡಗಳಿಗಳೂ ಮುಖ್ಯವಾಗಿದೆ. ಈವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಒಟ್ಟು 15 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 12ರಲ್ಲಿ ಗೆಲುವು ದಾಖಲಿಸಿದರೆ, ಪಾಕಿಸ್ತಾನವು 3 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ.
