ಚೆನ್ನೈ: ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರವೇ ಜಾರಿಗೊಳಿಸಬೇಕು, ಅದಕ್ಕಾಗಿ ಮತ್ತಷ್ಟು ಸಮಯವನ್ನು ವ್ಯರ್ಥ ಮಾಡಬಾರದು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ಮಹಿಳೆಯರ ಹಕ್ಕುಗಳ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಅಸಾಧಾರಣ ಕ್ರೋಡೀಕೃತ ಶಕ್ತಿಯಾಗಲಿದ್ದಾರೆ ಎಂಬುದು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅರ್ಥವಾಗಲು ಪ್ರಾರಂಭವಾಗಿರುವುದರಿಂದ ಇಂದು ಮಹಿಳೆಯರ ಸಬಲೀಕರಣದ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ ಎಂದರು.
ಇನ್ನು ನನ್ನ ಸಹೋದರಿಯರ ಪರವಾಗಿ ನಾನು ಇದಕ್ಕಿಂತ ಹೆಚ್ಚಿನದನ್ನು ಆಗ್ರಹಿಸುತ್ತೇನೆ. ಮಹಿಳಾ ಮೀಸಲಾತಿ ಮಸೂದೆಯು ತಕ್ಷಣವೇ ಜಾರಿಯಾಗಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.