ವಿವಾಹಿತ ಮಹಿಳೆಯರು ಮತ್ತು ಇತರ ಮಹಿಳೆಯರು ಮಧ್ಯವಯಸ್ಸಿನಲ್ಲಿ ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ತಜ್ಞರು ಹೇಳಿದ್ದಾರೆ.
SWAN ರಾಷ್ಟ್ರದಾದ್ಯಂತ ಮಹಿಳೆಯರ ಆರೋಗ್ಯದ ಅಧ್ಯಯನ ಪ್ರಕಾರ, ಮಹಿಳೆಯರಲ್ಲಿ ಸಾವುಗಳು ನಿದ್ರೆಯ ಕೊರತೆಯಿಂದಾಗಿ ಹೃದಯರಕ್ತನಾಳದ ಕಾಯಿಲೆಯಿಂದ ಉಂಟಾಗುತ್ತವೆ. 42 ರಿಂದ 52 ವರ್ಷದೊಳಗಿನವರ ಮೇಲೆ ನಡೆಸಿದ ಪರೀಕ್ಷೆಯಲ್ಲಿ, ನಿದ್ರೆಯ ಕೊರತೆಯಿಂದ ಮಹಿಳೆಯರಿಗೆ ಹೃದಯಾಘಾತ ಅಧಿಕ ರಕ್ತದೊತ್ತಡದ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
ಹಾಗಾಗಿ ಅದಕ್ಕೆ ಸೂಕ್ತ ಪರಿಹಾರ ಹಾಗೂ ಕೈಗೊಳ್ಳಬೇಕಾದ ಕ್ರಮಗಳು.!
ನಿಯಮಿತವಾಗಿ ಯೋಗಾಭ್ಯಾಸ, ಪ್ರಾಣಾಯಾಮ ಮಾಡಿ. ದೈಹಿಕ ಚಟುವಟಿಕೆ, ವ್ಯಾಯಾಮಗಳನ್ನು ಮಾಡಿ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಸೇವಿಸಿ. ಮಲಗುವ ಮುನ್ನ ಎಳ್ಳೆಣ್ಣೆಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡಿ.
ತಡರಾತ್ರಿಯಲ್ಲಿ ಟಿವಿ ನೋಡುವುದನ್ನು ಅಥವಾ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ. ಸಂಜೆಯ ನಂತರ ಕಾಫಿ ಅಥವಾ ಟೀ ಸೇವಿಸಬೇಡಿ. ಮಲಗುವ ಕನಿಷ್ಠ 2 ಗಂಟೆಗಳ ಮೊದಲು ರಾತ್ರಿಯ ಊಟವನ್ನು ಸೇವಿಸಿ. ಮಲಗುವ ಮೊದಲು ಧ್ಯಾನ ಮಾಡಿದರೆ ಒತ್ತಡವನ್ನು ಕಡಿಮೆ ಮಾಡಬಹುದು