ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾನೇ ಇದೆ. ಭಾರತೀಯ ಮಹಿಳೆಯರ ಪಾಲಿಗೆ ಇದೊಂದು ಮಹಾಮಾರಿ.ಪ್ರತಿ 29 ಸೆಕೆಂಡ್ ಗಳಿಗೊಂದರಂತೆ ಭಾರತದಲ್ಲಿ ಹೊಸ ಕೇಸ್ ಗಳು ಪತ್ತೆಯಾಗುತ್ತಿವೆ.
ಈ ಮಾರಕ ಖಾಯಿಲೆ ನಿಮ್ಮನ್ನು ಆವರಿಸದಂತೆ ನೀವು ಎಚ್ಚರ ವಹಿಸಬಹುದು. ಮಹಿಳೆಯರು ತಮ್ಮ ದೇಹದ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಪ್ರತಿ ಕ್ಷಣವೂ ಎಚ್ಚರವಾಗಿ ಇರುವುದು ಒಳ್ಳೆಯದು. ತಮಗೆ ಅರಿವಿಲ್ಲದೆ ಮಾಡುವ ಈ ಕೆಳಗಿನ ಕೆಲವೊಂದು ತಪ್ಪುಗಳಿಂದ ಸ್ತನ ಕ್ಯಾನ್ಸರ್ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ಹಾಗಾಗಿ ಈ ವಿಚಾರದಲ್ಲಿ ಯಾವುದೇ ಕ್ಷಣದಲ್ಲೂ ನಿರ್ಲಕ್ಷತೆ ಬೇಡ.
ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಈ ಕೆಳಗಿನ ರೀತಿ ಎಂದಿಗೂ ಮಾಡಬೇಡಿ : ಮನುಷ್ಯನಿಗೆ ಬೊಜ್ಜಿನ ಸಮಸ್ಯೆ ಹಲವಾರು ಆರೋಗ್ಯದ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಕ್ಯಾನ್ಸರ್ ಸಮಸ್ಯೆ, ಮಧುಮೇಹ ಮತ್ತು ಹೃದಯದ ಸಮಸ್ಯೆ ಇದ್ದೇ ಇರುತ್ತದೆ. ಸಾಧಾರಣವಾಗಿ ನಾವೆಲ್ಲರೂ ಬೊಜ್ಜಿನ ಸಮಸ್ಯೆಯನ್ನು ತೀರಾ ಕಡೆಗಣಿಸುತ್ತೇವೆ. ಹಾಗಾಗಿ ನಮ್ಮ ಊಹೆಗೂ ಮೀರಿ ನಮಗೆ ಈ ಸಮಸ್ಯೆ ತೊಂದರೆ ಕೊಡುತ್ತದೆ. ಕೇವಲ ಆರೋಗ್ಯಕರ ಆಹಾರ ಪದ್ಧತಿ ಮತ್ತು ದೇಹಕ್ಕೆ ನಿಯಮಿತವಾದ ವ್ಯಾಯಾಮ ಮಾಡುವುದರಿಂದ ಬೊಜ್ಜಿನ ಸಮಸ್ಯೆಯನ್ನು ಮುಕ್ಕಾಲು ಭಾಗ ತಡೆಗಟ್ಟಬಹುದು. ತಮ್ಮ ಗ್ಲಾಮರ್ ಹಾಳಾಗುತ್ತದೆ ಎಂದು ಅನೇಕ ಮಹಿಳೆಯರು ಬಹಳ ಬೇಗನೆ ತಮ್ಮ ಮಕ್ಕಳಿಗೆ ಸ್ತನ್ಯಪಾನವನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ಗ್ಲಾಮರ್ ಉಳಿಸಿಕೊಳ್ಳಲು ಹೋಗಿ ಕ್ಯಾನ್ಸರ್ ಕಾಯಿಲೆಯನ್ನು ದತ್ತು ಪಡೆದಂತೆ ಆಗುತ್ತದೆ. ಇದು ಸತ್ಯ ಎಂದು ಹಲವಾರು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಯಾವ ಮಹಿಳೆಯರು ಬಹಳ ಬೇಗನೆ ಮಕ್ಕಳಿಗೆ ಸ್ತನ್ಯಪಾನವನ್ನು ನಿಲ್ಲಿಸುತ್ತಾರೆ ಅವರಿಗೂ ಕೂಡ ಮುಂಬರುವ ದಿನಗಳಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಮಹಿಳೆಯರ ದೇಹದಲ್ಲಿ ಏರುಪೇರಾಗುವ ಹಾರ್ಮೋನುಗಳು.
ಹಾರ್ಮೋನುಗಳು ಏರುಪೇರಾದಂತೆ ಕ್ಯಾನ್ಸರ್ ಸಮಸ್ಯೆ ಸಹ ಬರುವ ಸಾಧ್ಯತೆ ಇದೆ. ನೀವು ತೆಗೆದುಕೊಳ್ಳುವ ಗರ್ಭ – ನಿರೋಧಕ ಮಾತ್ರೆಗಳು ಮತ್ತು ಇಂಜೆಕ್ಷನ್ ಗಳು ಕೆಲವು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ತರಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ನೀವಾಗಿಯೇ ಮೆಡಿಕಲ್ ಶಾಪ್ ಗಳಿಂದ ಗರ್ಭ – ನಿರೋಧಕ ಔಷಧಿಗಳನ್ನು ತೆಗೆದುಕೊಂಡು ಸೇವಿಸಬೇಡಿ. ನಿಮ್ಮ ದೇಹಕ್ಕೆ ಅನುಗುಣವಾಗಿ ಸೂಕ್ತವಾಗುವಂತಹ ಔಷಧಿಗಳನ್ನು ವೈದ್ಯರಿಂದ ಕೇಳಿ ಪಡೆಯಿರಿ. ಆರೋಗ್ಯಕರ ಜೀವನಶೈಲಿ ಮೂಲಕ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ನಿಯಮಿತವಾದ ವ್ಯಾಯಾಮದ ಜೊತೆಗೆ ಡಯಟ್ ಕೂಡ ಒಳ್ಳೆಯದು. ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಪಡಿಸಲು ಸೂಕ್ತ ಆಹಾರ ಸೇವಿಸಿ. ಇದರಿಂದ ಸ್ತನ ಕ್ಯಾನ್ಸರ್ ಬರದಂತೆ ತಡೆಯಬಹುದು. ಗಾಳಿಗೆ ತೆರೆದಿಟ್ಟ ಆಹಾರ ಬೇಡ, ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಿ. ಹೆಲ್ತಿ ಡಯಟ್ ಪಾಲಿಸುವ ಮೂಲಕ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಫಿಟ್ ಆಗಿ ಇರಬೇಕಂದ್ರೆ ಮಹಿಳೆಯರು ಪ್ರತಿ ದಿನ ವ್ಯಾಯಾಮ ಮಾಡಬೇಕು.
ದೈಹಿಕವಾಗಿ ನೀವು ಸದೃಢರಾಗಿರುವುದು ಅತ್ಯಂತ ಅವಶ್ಯಕ. ನಿಯಮಿತವಾಗಿ ಜಿಮ್ ಗೆ ಹೋಗಬಹುದು, ಅಥವಾ ಮನೆಯಲ್ಲೇ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆ ಇದ್ರೆ ಕ್ಯಾನ್ಸರ್ ಅಪಾಯ ಶೇ.20ರಷ್ಟು ಕಡಿಮೆಯಾಗುತ್ತದೆ. ಮಗುವಿಗೆ ಸ್ತನ್ಯಪಾನ ಮಾಡಿಸಿದ್ದರೆ ಅಂಥವರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಸ್ತನ್ಯಪಾನ ಮಾಡಿಸುವುದರಿಂದ ದೇಹದಲ್ಲಿರುವ ಈಸ್ರೋಜನ್ ಪ್ರಮಾಣ ಕಡಿಮೆಯಾಗುತ್ತದೆ. ದೇಹದ ಅಂದ ಹಾಳಾಗುತ್ತದೆ ಎಂಬ ಕಾರಣಕ್ಕೆ ಮಗುವಿಗೆ ಹಾಲುಣಿಸದೇ ಇರಬೇಡಿ. ಯಾಕಂದ್ರೆ ಸ್ತನ್ಯಪಾನದಿಂದ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಸೆಲ್ ಗಳು ಬೆಳೆಯದಂತೆ ತಡೆಯಬಹುದು.ಅತಿಯಾದ ಧೂಮಪಾನ ಮತ್ತು ಮದ್ಯಪಾನ ಸ್ತನ ಕ್ಯಾನ್ಸರ್ ಗೆ ಆಹ್ವಾನ ನೀಡಿದಂತೆ. ಸಂಶೋಧನೆಯಲ್ಲಿ ಇದು ಸಾಬೀತಾಗಿದೆ.
ಕುಟುಂಬದಲ್ಲಿ ಯಾರಿಗಾದ್ರೂ ಸ್ತನ ಕ್ಯಾನ್ಸರ್ ಇದ್ದಲ್ಲಿ ಪೀರಿಯಾಡಿಕ್ ಸ್ಟ್ರೀನಿಂಗ್ ಮಾಡಿಸಿಕೊಳ್ಳಲೇಬೇಕು. 30 ವರ್ಷವಾಗುತ್ತಿದ್ದಂತೆ ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಮ್ಯಾಮೊಗ್ರಫಿ ಮತ್ತು ಅಲ್ಮಾ ಸೌಂಡ್ ಎಂಬ ಎರಡು ಬಗೆಯ ತಪಾಸಣೆ ಲಭ್ಯವಿದೆ. ನೀವು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಬೇಕೆಂದಿದ್ದರೆ ಸ್ತನ ಕ್ಯಾನ್ಸರ್ ನ ಅಪಾಯ ತಡೆಯಲು ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯ. ಹಾರ್ಮೋನ್ ಇರುವ ಮಾತ್ರೆಗಳನ್ನು ದೀರ್ಘಕಾಲ ತೆಗೆದುಕೊಳ್ಳಬೇಡಿ.