ಬೆಂಗಳೂರಿನ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಸ್ಥಾಪಿಸಲಾಗಿದೆ. ನೀಲಿ ಬಣ್ಣದಲ್ಲಿರುವ ಟೆಲಿಫೋನ್ ಬೂತ್‌ನಂತಹ ರಚನೆ ಹೊಂದಿರುವ ಸೇಫ್ಟಿ ಐಲ್ಯಾಂಡ್ ಇರಲಿದೆ.
ಯಾರಾದರೂ ಸಂಕಷ್ಟದಲ್ಲಿರುವಾಗ ಅಥವಾ ಅವರ ಮೊಬೈಲ್ ಫೋನ್ ಸಂಪರ್ಕ ಸಾಧ್ಯವಾಗದಿದ್ದಾಗ ಅವರು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಸಬಹುದು.
ಪ್ರತಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಸಿಸಿಟಿವಿ ಹೊಂದಿದ್ದು, ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ. ಮಹಿಳೆಯರ ಸುರಕ್ಷತೆ ಇದರ ಮೂಲ ಉದ್ದೇಶ.