ಲೇಹ್: ಬೌದ್ಧ ಧರ್ಮಕ್ಕೆ ಸೇರಿದ ಮಹಿಳೆಯೊಬ್ಬರು ಮುಸ್ಲಿಂ ವ್ಯಕ್ತಿಯಾದ ಮಂಜೂರ್ ಅಹ್ಮದ್ ಎನ್ನುವವರ ಜೊತೆಗೆ ಓಡಿ ಹೋಗಿ, ಮದುವೆಯಾದ ಕಾರಣಕ್ಕಾಗಿ ಮಂಜೂರ್ ಅವರ ತಂದೆ ನಾಸಿರ್ ಅಹ್ಮದ್ ಅವರನ್ನು ಲಡಾಖ್ ಬಿಜೆಪಿ ಘಟಕವು ತನ್ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವ ಘಟನೆ ವರದಿಯಾಗಿದೆ.
ಲಡಾಖ್‌ನಲ್ಲಿ ಅನೇಕ ಧಾರ್ಮಿಕ ಸಮುದಾಯಗಳಿದ್ದು, ಇಂಥ ಸೂಕ್ಷ್ಮ ಘಟನೆಗಳು ಇಲ್ಲಿರುವ ಸಮುದಾಯಗಳ ನಡುವಿನ ಕೋಮು ಸೌಹಾರ್ದವನ್ನು ಹದಗೆಡಿಸುತ್ತವೆ. ಈ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ. ಆದರೆ, ತಮ್ಮ ಮಗನ ಮದುವೆಗೆ ನನ್ನ ವಿರೋಧವೂ ಇದೆ. ಹೀಗಿದ್ದಾಗ ಈ ಘಟನೆಗೆ ನನ್ನನ್ನು ಹೊಣೆ ಮಾಡಿ ಶಿಕ್ಷೆ ನೀಡಿರುವುದು ಸಮಂಜಸವಲ್ಲ ಎಂದು ನಾಸಿರ್ ಹೇಳಿಕೊಂಡಿದ್ದಾರೆ.