ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಕಾನೂನು ಸಂಕಷ್ಟ ಮತ್ತೆ ಎದುರಾಗಿದೆ.
ಜಾಮೀನು ಪಡೆದು ನಿರಾಳವಾಗಿದ್ದ ರೇವಣ್ಣಗೆ ಈಗ ವಿಶೇಷ ತನಿಖಾ ತಂಡ (SIT) ಶಾಕ್ ನೀಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ.
ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್‍ಗೆ ಎಸ್‍ಐಟಿ ಅರ್ಜಿ ಅಲ್ಲಿಸಿದೆ. ಹೈಕೋರ್ಟ್‍ನ ಜನಪ್ರತಿನಿಧಿಗಳ ಪೀಠಕ್ಕೆ ಅರ್ಜಿ ಸಲ್ಲಿಸಿದ ಎಸ್‍ಐಟಿ, ಕೆಳ ನ್ಯಾಯಾಲಯದ ಜಾಮೀನು ಆದೇಶ ರದ್ದು ಮಾಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ನಡೆಯುವ ವಾದ-ಪ್ರತಿಪಾದ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.