ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಹಿಂದಿರುಗುತ್ತಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಡೇವಿಡ್ ಕ್ಯಾಮರಾನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಕ್ಯಾಮರಾನ್ ಅವರು 2010ರಿಂದ 2016ರವರೆಗೆ ಬ್ರಿಟನ್ ನಾಯಕರಾಗಿದ್ದರು. ಇದೀಗ ಕ್ಯಾಮರಾನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ರಿಷಿ ಸುನಕ್ ನೇಮಕ ಮಾಡಿದ್ದಾರೆ.
ಈ ಮಧ್ಯೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಸಂಪುಟದ ಸದಸ್ಯೆ ಸುವೆಲ್ಲಾ ಬ್ರೇವರ್‌ಮನ್ ಅವರನ್ನು ವಜಾಗೊಳಿಸಿರುವ ಬೆನ್ನಲೇ. ಸುವೆಲ್ಲಾ ಬ್ರೇವರ್‌ಮನ್ ಅವರ ಜಾಗಕ್ಕೆ ಜೇಮ್ಸ್ ಕ್ಲೇವರ್ಲೀ ಅವರನ್ನ ನೇಮಕ ಮಾಡಲಾಗಿದೆ.
ಇನ್ನು ನೇಮಕಾತಿಯ ಕುರಿತು ಮಾತನಾಡಿದ ಡೇವಿಡ್ ಕ್ಯಾಮರೂನ್ ಕೆಲವು ವೈಯಕ್ತಿಕ ನಿರ್ಧಾರಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ, ರಿಷಿ ಸುನಕ್ ಪ್ರಬಲ ಮತ್ತು ಸಮರ್ಥ ಪ್ರಧಾನ ಮಂತ್ರಿ ಎಂದು ಸ್ಪಷ್ಟವಾಗಿದೆ. ನಾನು ಈ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.