ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರು ಜಾರಿ ನಿರ್ದೇಶನಾಲಯ (ಇಡಿ)ಯಿಂದ ಬಂಧನವಾಗಿದ್ದು, ಇಡಿ ಅಧಿಕಾರಿಗಳು ನಾಗೇಂದ್ರ ಕುಟುಂಬದ ಹತ್ತಕ್ಕೂ ಹೆಚ್ಚು ಬ್ಯಾಂಕ್ ಪಾಸ್‌ಬುಕ್ ಸೀಜ್ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷಗಳಿಂದ ನಡೆದಿರೋ ಇಂಚಿಂಚೂ ಟ್ರಾನ್ಸಾಕ್ಷನ್ ಮುಂದಿಟ್ಟು ನಾಗೇಂದ್ರರನ್ನ ಇಡಿ ಪ್ರಶ್ನೆ ಮಾಡುತ್ತಿದೆ. ನಾಗೇಂದ್ರ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರೋ ಬ್ಯಾಂಕ್ ಖಾತೆಗಳ ಸ್ಟೇಟ್ಮೆಂಟ್ ಪಡೆದಿರೋ ಇಡಿ ಅಧಿಕಾರಿಗಳು, ಹಣ ಟ್ರಾನ್ಸಕ್ಷನ್ ಮತ್ತು ಆದಾಯದ ಮೂಲದ ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ನಾಗೇಂದ್ರ ಮಾತ್ರ ಏನೇ ಕೇಳಿದ್ರು ತನಗೇನು ಗೊತ್ತಿಲ್ಲ, ನಮ್ಮ ವಕೀಲರನ್ನ ಕೇಳ ಬೇಕು ಅಂತ ಮಾತ್ರ ಹೇಳ್ತಿದ್ದಾರಂತೆ. ಅಲ್ಲದೇ ನೆಕ್ಕುಂಟಿ ನಾಗರಾಜ್, ನಾಗೇಂದ್ರ ಸಂಬಂಧಿ ನಾಗೇಶ್ವರ್ ರಾವ್ ನಿಗಮದ ಎಂಡಿ ಪದ್ಮನಾಭ್ ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ಮಾಡಿದ್ದು, ಸಭೆಯಲ್ಲಿ ಹೊಸ ಖಾತೆ ತೆರೆಯೋ ಬಗ್ಗೆ ಚರ್ಚೆ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಲ್ಲಿರೋ ಎಂಡಿ ಪದ್ಮನಾಭ್ ನನ್ನು ಇಡಿ ವಿಚಾರಣೆ ನಡೆಸಿದೆ.