ಮಾಡೆಲಿಂಗ್ ತೊರೆದು ಐಎಫ್‌ಎಸ್ ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್

WhatsApp
Telegram
Facebook
Twitter
LinkedIn

ರಾಜಸ್ಥಾನ: ಕೆಲವರು ತಮ್ಮ ಕನಸಿಗಾಗಿ ಅವರ ಆಸಕ್ತಿಯ ಕ್ಷೇತ್ರವನ್ನು ತೊರೆಯುತ್ತಾರೆ. ಹೀಗೆ ತಮ್ಮ ಮಾಡೆಲಿಂಗ್ ಕ್ಷೇತ್ರವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಐಎಫ್‌ಎಸ್ ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್ ಅವರ ಯಶೋಗಾಥೆ ಇದು.

ಐಶ್ವರ್ಯಾ ಶೆಯೋರಾನ್ ಅವರು ರಾಜಸ್ಥಾನದಲ್ಲಿ ಜನಿಸಿದರು. ಅವರ ತಂದೆ ಕಮಾಂಡಿAಗ್ ಆಫೀಸರ್ ಅಜಯ್ ಕುಮಾರ್, ಕರೀಂನಗರದ 9 ನೇ ತೆಲಂಗಾಣ ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐಶ್ವರ್ಯಾ ಅವರು ಜನಿಸಿದ ಬಳಿಕ ದೆಹಲಿಗೆ ತೆರಳಿದರು. ಅಲ್ಲಿ ಅವರು ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಅವರು ೧೨ ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 97.5% ಗಳಿಸುತ್ತಾರೆ. ಬಳಿಕ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆಯುತ್ತಾರೆ.

ಕಾಲೇಜಿನ ಸಮಯದಲ್ಲಿ ಐಶ್ವರ್ಯಾ ಶೆಯೋರಾನ್ ಮಾಡೆಲಿಂಗ್‌ಗೆ ಸೇರಿಕೊಂಡರು. ಬಳಿಕ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು. 2016 ರಲ್ಲಿ ಐಶ್ವರ್ಯಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆದರು. ಈ ಹಿಂದೆ 2015 ರಲ್ಲಿ ಮಿಸ್ ದೆಹಲಿ ಮತ್ತು 2014 ರಲ್ಲಿ ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ನಂತಹ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

2018 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದ ಐಶ್ವರ್ಯಾ ಅವರು, ಯಾವುದೇ ತರಬೇತಿಯನ್ನು ಪಡೆಯದೇ 10 ತಿಂಗಳುಗಳ ಕಾಲ ಸ್ವಯಂ ಅಧ್ಯಯನ ನಡೆಸುತ್ತಾರೆ. ಇದರ ಫಲವಾಗಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ರ‍್ಯಾಂಕ್ ಗಳಿಸುತ್ತಾರೆ.

ಪ್ರಸ್ತುತ ಐಶ್ವರ್ಯಾ ಶೆಯೋರನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಐಎಫ್‌ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಅವರು ಅನೇಕ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon