ಚಿತ್ರದುರ್ಗ : ಮಾದಾರ ಚನ್ನಯ್ಯರವರನ್ನು ಚುನಾವಣೆಗೆ ತರಬೇಕೆಂದು ಯಾವ ಚರ್ಚೆಯೂ ಸಹಾ ಆಗಿಲ್ಲ, ನಮ್ಮಲ್ಲಿ ಅಭ್ಯರ್ಥಿಗಳೇ ಬಗ್ಗೆಯೇ ಚರ್ಚೆಯಾಗುತ್ತಿಲ್ಲ, ಕಮಲ ಚುನಾವಣೆಗೆ ನಿಲ್ಲುತ್ತದೆ, ಕಮಲಕ್ಕೆ ಮತವನ್ನು ಹಾಕಿಸಬೇಕಿದೆ. ರಾಜ್ಯದ ಯಾವುದೇ ಭೂತ್ನಲ್ಲಿ ಕಮಲವನ್ನು ಆರಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ನಮ್ಮಲ್ಲಿ ಅಭ್ಯರ್ಥಿಗಳಿಗಿಂತ ಕಮಲ ಚಿಹ್ನೆ ಮುಖ್ಯ ಇದರ ಮೇಲೆ ಮತವನ್ನು ಕೇಳಬೇಕಿದೆ. ಇಲ್ಲಿ ಕಮಲವನ್ನು ಗೆಲ್ಲಿಸಬೇಕಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾದಾರ ಚನ್ನಯ್ಯ ಶ್ರೀಗಳನ್ನು ರಾಜಕೀಯಕ್ಕೆ ಬಿಜೆಪಿ ಕರೆ ತರಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮದು ಮಠ ಯಾವುದೋ ಒಂಧು ರಾಜಕೀಯ ಪಕ್ಷಕ್ಕೆ ಸಿಮೀತವಾದ ಮಠವಲ್ಲ, ನಮ್ಮ ಮಠ ಇಡೀ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡುವಂತ ಮಠವಾಗಬೇಕಿದೆ. ನಮ್ಮ ಮಠ ಇಡಿ ಸಮಾಜಕ್ಕೆ ಎಲ್ಲಾ ಪಕ್ಷ ಮತ್ತು ನಾಗರೀಕರಿಗೂ ಒಂದು ಸಂದೇಶವನ್ನು ಜಾಗೃತಿಯನ್ನು ಮೂಡಿಸುವಂತ ಕೇಂದ್ರವನ್ನಾಗಿ ಮಠವನ್ನು ಸ್ವೀಕಾರ ಮಾಡಲಾಗಿದೆ. ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸನ್ನು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾರಾಯಣಸ್ವಾಮಿ ಅಧಿಕಾರಕ್ಕಾಗಿ ಬರುವ ಅಧಿಕಾರಕ್ಕಾಗಿ ಕೆಲಸವನ್ನು ಮಾಡುವ ನಾರಾಯಣಸ್ವಾಮಿ ಅಲ್ಲ ನಾನು ಬಿಜೆಪಿ ಕಾರ್ಯಕರ್ತರ ಎಲ್ಲಿಯೂ ನಾನು ಇಪೋಟ್ ಆಗಿ ಬಂದವನಲ್ಲ, ಬಿಜೆಪಿ ಕಟ್ಟಿ ಬೆಳಸುವ ಸಿದ್ದಾಂತವನ್ನು ಸ್ವೀಕಾರ ಮಾಡಿಕೊಂಡು ತಳ ಹಂತದಿಂದ ಬೆಳೆದಿರುವ ಕಾರ್ಯಕರ್ತ ನಮಗೆ ಕಮಲ ಮುಖ್ಯ ನಾನು ಕಮಲದ ಸಂದೇಶವನ್ನು ಸೇನಾನಿಗಳಾಗಿ ಕೆಲಸವನ್ನು ಮಾಡುವಂತ ಕಾರ್ಯಕರ್ತರ ಪಡೆ ನಮ್ಮದು ಎಂದರು.
ಮಾದಾರ ಚನ್ನಯ್ಯ ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸನ್ನು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದರು.