ಬೆಂಗಳೂರು : ವಾಲ್ಮೀಕಿ ನಿಗಮ ಹಗರದಲ್ಲಿ ರಾಜ್ಯ ಸರ್ಕಾರದ ಮಾಜಿ ಸಚಿವ, ಹಾಲಿ ಶಾಸಕ ಬಿ.ನಾಗಂದ್ರ ಅರೆಸ್ಟ್ ಆಗಿದ್ದಾರೆ. ತನಿಖೆಗೆ ಸಹಕಾರ ನೀಡದ ಹಿನ್ನೆಲೆ ನಾಗೇಂದ್ರರನ್ನ ಇಡಿ ಬಂಧಿಸಿದೆ. ನಿನ್ನೆ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆಯುತ್ತಿದ್ದಂತೆ ದದ್ದಲ್ ಎಸ್ ಐಟಿ ವಿಚಾರಣೆಗೆ ಓಡೋಡಿ ಬಂದಿದ್ರು. ಸಂಜೆ ಸುಮಾರು 7ಗಂಟೆವರೆಗೂ ಎಸ್ ಐಟಿ ವಿಚಾರಣೆಯಲ್ಲಿ ಭಾಗಿಯಾಗಿದ್ರು. ಎಸ್ ಐಟಿ ವಿಚಾರಣೆ ವೇಳೆಯೇ ಇಡಿ ನನ್ನನ್ನ ಅರೆಸ್ಟ್ ಮಾಡಬಹುದು ಎಂದು ದದ್ದಲ್ ಆತಂಕಕ್ಕೊಳಗಾಗಿದ್ರು. ಇನ್ನೊಂದು ಕಡೆ ದದ್ದಲ್ ಹೊರ ಬರ್ತಿದ್ದಂತೆ ಇಡಿ ದದ್ದಲ್ ನ ವಶಕ್ಕೆ ಪಡೆಯೋ ಸಾಧ್ಯತೆಯಿತ್ತು. ಇದ್ರ ಜೊತೆಗೆ ಮಾಧ್ಯಮ ಕಣ್ತಪ್ಪಿಸಿ ಎಸ್ಕೇಪ್ ಆಗಲು ದದ್ದಲ್ ತಮ್ಮ ಇನ್ನೋವಾ ಕಾರ್ ಮೊದಲೆ ಕಳುಹಿಸಿ ನಂತರ ಸಣ್ಣ ಕಾರ್ ನಲ್ಲಿ ಸಿಐಡಿ ಕಚೇರಿಯಿಂದ ಹೊರ ಬಂದು ಎಸ್ಕೇಪ್ ಆಗಿದ್ದಾರೆ. ಸದ್ಯ ದದ್ದಲ್ ಎಲ್ಲಿದ್ದಾರೆ ಎಂದು ಗೊತ್ತಾಗ್ತಿಲ್ಲ. ಸೋಮವಾರ ದದ್ದಲ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ನೀಡಿದೆ. ಸೋಮವಾರ ದದ್ದಲ್ ಎಸ್ಐಟಿ ವಿಚಾರಣೆಗೆ ಬರ್ತಾರ ಇಲ್ಲ ಅಷ್ಟರಲ್ಲಿ ಇಡಿ ದದ್ದಲ್ ನ ವಶಕ್ಕೆ ಪಡೆಯುತ್ತಾರ ಎಂದು ಕಾದು ನೋಡಬೇಕಿದೆ.