ಬೆಂಗಳೂರು: ಮಾರಕ ಕಾಯಿಲೆಯಾದ ಡೆಂಗ್ಯೂ, ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಈ ಜ್ವರ ಹರಡುತ್ತದೆ. ಈ ಸೊಳ್ಳೆ ಹೆಚ್ಚು ಹಗಲಿನ ವೇಳೆ ಕಚ್ಚುತ್ತದೆ.
ಡೆಂಗ್ಯೂ ಜ್ವರದ ಲಕ್ಷಣ ಹೀಗಿವೆ. ತೀವ್ರತರ ಜ್ವರ . ವಿಪರೀತ ತಲೆನೋವು . ಕಣ್ಣುಗಳ ಹಿಂಭಾಗದಲ್ಲಿ ನೋವು. ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು . ವಸಡು ಮತ್ತು ಮೂಗಿನಲ್ಲಿ ರಕ್ತಸ್ರಾವ, ಈ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ, ಕ್ಲಿನಿಕ್‌ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ.!