‘ಮಾರುತಿ 800’ ಗೆ ಈಗ 40 ಹರೆಯ: ಭಾರತೀಯರ ಹೃದಯಗೆದ್ದ ಕಾರಿನ ಇತಿಹಾಸ ಇಲ್ಲಿದೆ

ನವದೆಹಲಿ: “ಮಾರುತಿ 800 ” ಬಹುತೇಕ ಪ್ರತಿಯೊಬ್ಬ ಭಾರತೀಯನಿಗೂ ಚಿರಪರಿಚವಾದ ಕಾರು. ಒಂದು ಕಾಲದಲ್ಲಿ ಭಾರತದ ರಸ್ತೆಗಳಲ್ಲಿ ಅಕ್ಷರಶಃ ಮಹಾರಾಜನಂತೆ ಮೆರೆದ ಮಾರುತಿ 800 ಐಕಾನಿಕ್ ಕಾರಿಗೆ ಈಗ ೪೦ ಹರೆಯ. ನಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿರುವ ‘ಜನರ ಕಾರು’ ಎಂದು ಕರೆಸಿಕೊಂಡಿರುವ ಮಾರುತಿ 800 ಇಂದು ತನ್ನ ೪೦ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದೆ.

ಡಿಸೆಂಬರ್ 14, 1983 ರಂದು ಹುಟ್ಟಿದ ಮಾರುತಿ 800 ಕಾರಿನ ಮೊದಲ ಗ್ರಾಹಕ ಹರ್ಪಲ್ ಸಿಂಗ್. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಾರುತಿ 800 ಕಾರಿನ ಕೀಯನ್ನು ಹರ್ಪಲ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದರು. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಮಾರುತಿ 800ಗೆ ಸಲ್ಲುತ್ತಿದೆ.

ಮಾರುತಿ ಯೋಜನೆ – ಅಥವಾ ಆಗಿನ ಮಾರುತಿ ಉಗ್ಯೋಗ್ ಲಿಮಿಟೆಡ್ ಎಂಬುದು ಸಂಜಯ್ ಗಾಂಧಿಯವರ ಕನಸಿನ ಕೂಸಾಗಿತ್ತು. ಸಂಜಯ್ ಅವರು ಕಾರುಗಳ ಬಗ್ಗೆ ಅಮೂಲ್ಯವಾದ ಜ್ಞಾನ ಹೊಂದಿದ್ದು, ಅವರು ಸೊಗಸಾದ, ದಕ್ಷ, ಸುಲಭ ಮತ್ತು ಕೈಗೆಟುಕುವ ದರದ ಭಾರತೀಯ ಕಾರಿನ ಕಲ್ಪನೆಯನ್ನು ತಾಯಿಗೆ ಮುಂದೆ ಭಾರತದ ಪ್ರಧಾನ ಮಂತ್ರಿಯಾದ ಇಂದಿರಾಗಾಂಧಿಯವರೊಂದಿಗೆ ಹಂಚಿಕೊಂಡಿದ್ದರು. ಆದರೆ 1980 ರಲ್ಲಿ ವಿಮಾನ ಅಪಘಾತದಲ್ಲಿ ಸಂಜಯ್‌ರ ಅಕಾಲಿಕ ಮರಣವು ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆದರೂ ಖ್ಯಾತ ತಂತ್ರಜ್ಞರಾದ ವಿ.ಕೃಷ್ಣಮೂರ್ತಿ ಮತ್ತು ಡಾ.ಡಿ.ವಿ. ಕಪೂರ್, ಕನಸನ್ನು ನನಸಾಗಿಸಲು ಪಣ ತೊಟ್ಟಾರು. ಪ್ರಧಾನಿ ಇಂದಿರಾ ಗಾಂಧಿ ಇದಕ್ಕೆ ಸಹಕಾರ ನೀಡಿದರು.

Advertisement

ಮಾರುತಿ ಸುಜುಕಿ 800 ಅನ್ನು ಭಾರತದಲ್ಲಿ ಮೊದಲ ಬಾರಿಗೆ ಕೇವಲ 47,500 ರೂ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು ದೇಶದಲ್ಲಿ ಕಾರು ತಯಾರಕರ ಅತ್ಯಂತ ಯಶಸ್ವಿ ಪ್ರಯಾಣದ ಆರಂಭ ಮಾಡಿತ್ತು. ಪ್ರತಿ 800ನೇ ನಿಮಿಷಕ್ಕೆ ಹೊಸ ಕಾರನ್ನು ಹೊರತರುವುದಾಗಿ ಹೇಳುತ್ತಿದ್ದ ಮಾರುತಿ ಕಾರ್ಖಾನೆಯನ್ನು ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಗುರ್ಗಾಂವ್‌ನಲ್ಲಿ ಈ ದಿನ ಉದ್ಘಾಟಿಸಿದ್ದರು.

ಗ್ರಾಹಕರ ಮನಗೆದ್ದ ಕಾರು ಒಂದು ಕಾಲದಲ್ಲಿ10 ಸಾವಿರ ರೂಪಾಯಿ ಕೊಟ್ಟು 1.2 ಲಕ್ಷ ಜನರು ಬುಕ್ ಮಾಡಿದ್ದರು ಬುಕ್ ಮಾಡಿದ್ದರು. ಮೊದಲಿನ ಮಾಡೆಲ್‌ಗಳನ್ನು ಗ್ರಾಹಕರಿಗೆ ಲಾಟರಿ ಸಿಸ್ಟಮ್ ಮೂಲಕ ವಿತರಿಸಲಾಯಿತು. ಆಗೆಲ್ಲ ಕಾರು ಬುಕ್ ಮಾಡಿ ವರ್ಷಗಟ್ಟಲೇ ಕಾಯಬೇಕಾದ ಸಂದರ್ಭವಿತ್ತು ಇತ್ತು. ಕೆಲವೊಮ್ಮೆ ಗ್ರಾಹಕರು ಹೆಚ್ಚಿನ ಹಣ ಕೊಟ್ಟು ಕಾರು ಡೆಲಿವರಿ ತೆಗೆದುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿರಲಿಲ್ಲ. ಅಷ್ಟೊಂದು ಡಿಮ್ಯಾಂಡ್ ಈ ಕಾರಿಗೆ ಇತ್ತು.

1980 ರ ದಶಕದಲ್ಲಿ ತನ್ನ ಛಾಪನ್ನು ಮೂಡಿಸಿದ ಕಾರಿನ ಉಪ್ತಾದನೆಯನ್ನು 2014ರಲ್ಲಿಸ್ಥಗಿತಗೊಳಿಸಲಾಯಿತು. 2014ರ ಫೆಬ್ರವರಿಯಲ್ಲಿ ಚಂಡಿಗಢನ ಗ್ರಾಹಕರೊಬ್ಬರು ಮಾರುತಿ 800 ಕಾರಿನ ಕೊನೆಯ ಮಾಲೀಕರಾದರು. ಇದರೊಂದಿಗೆ ಭಾರತೀಯ ಆಟೋ ಕ್ಷೇತ್ರದ ಐಕಾನಿಕ್ ಕಾರು ಇತಿಹಾಸದ ಪುಟಗಳನ್ನು ಸೇರಿತು. ಇಷ್ಟಾಗಿಯೂ ನೀವು ಭಾರತೀಯ ರಸ್ತೆಗಳಲ್ಲಿ ಮಾರುತಿ 800 ಕಾರುಗಳನ್ನು ಓಡುವುದನ್ನು ಕಾಣಬಹುದು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement