ರಾಜ್ಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಸಮಯದಲ್ಲಿ ಶಾಲೆಗಳಿಗೆ ಮೂರು ದಿನಗಳ ರಜೆ ಇರಲಿದೆ. ಅದು ಹೇಗೆ ಗೊತ್ತೇ?
ಮಾರ್ಚ್ 8ರಂದು (ಶುಕ್ರವಾರ) ಮಹಾ ಶಿವರಾತ್ರಿಗೆ ರಜೆ ಸಿಗಲಿದೆ. ನಂತರ 9ನೇ ತಾರೀಕು 2ನೇ ಶನಿವಾರ (ಸರ್ಕಾರಿ ಶಾಲೆ ಹೊರತುಪಡಿಸಿ ಬಹುತೇಕ ಖಾಸಗಿ ಶಾಲೆಗಳು) ರಜೆ ಇರುತ್ತವೆ.
ಹಾಗೇ 10 ರಂದು ಭಾನುವಾರವಾದ್ದರಿಂದ ಮಕ್ಕಳಿಗೆ ಸತತ ಮೂರು ದಿನ ರಜೆ ಸಿಗಲಿದೆ. ಅಲ್ಲದೆ, ಮಾರ್ಚ್ 25 ಹೋಳಿ (ನಿರ್ಬಂಧಿತ ರಜೆ) ಹಾಗೂ ಮಾರ್ಚ್ 29 ರಂದು ಗುಡ್ ಪೈಡೇ ಸಂದರ್ಭದಲ್ಲೂ ರಜೆ ಇರುತ್ತದೆ.