ಬೆಂಗಳೂರು: ಮಾರ್ಚ್ 25ರಿಂದ ಎಸ್ ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಮಾರ್ಚ್ 25 ರಂದು ಬೆಳಗ್ಗೆ 10.15 ರಿಂದ ಮ.1.30 ರ ವರೆಗೆ ಪ್ರಥಮ ಭಾಷೆ ಪರೀಕ್ಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ಎನ್.ಸಿ.ಇ.ಆರ್.ಟಿ, ಸಂಸ್ಕøತದ ಪರೀಕ್ಷೆ ನಡೆಯಲಿದೆ.
ಮಾ.27 ರಂದು ಸಮಾಜ ವಿಜ್ಞಾನ, ಮಾ.30 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ 2 ರಿಂದ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಏ.2 ರಂದು ಗಣಿತ, ಸಮಾಜಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಏ.3 ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಏ.4 ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಉರ್ದು, ತುಳು, ಅರೆಬಿಕ್, ಸಂಸ್ಕøತ, ಮತ್ತು ಏಪ್ರಿಲ್ 6 ರಂದು ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ ವಿಷಯಗಳ ಪರೀಕ್ಷೆ ನಡೆಯಲಿದೆ.