ದಾವಣಗೆರೆ: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರು ಮಾರ್ಚ್ 27 ರಂದು ಶ್ರೀರಾಮ ನವಮಿ ಮತ್ತು ಮಾರ್ಚ್ 30 ರಂದು ಶ್ರೀಮಹಾವೀರ ಜಯಂತಿ ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಮಾರ್ಚ್ 27 ಮತ್ತು 30 ರಂದು ಮಾಂಸ ಮಾರಾಟ ಮಾಡಬಾರದು ತಪ್ಪಿದಲ್ಲಿ ಪಾಲಿಕೆಯ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುದೆಂದು ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.































