‘ಮಾರ್ಟಿನ್’ ಯಶಸ್ವಿ ಪ್ರದರ್ಶನ – ಅಪಪ್ರಚಾರ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ಧ್ರುವ ಸರ್ಜಾ

ಆಯುಧ ಪೂಜೆ ಸಂದರ್ಭದಲ್ಲಿ ಬಿಡುಗಡೆ ಆದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ರಿಲೀಸ್ ಆದ ಕನ್ನಡ ಸಿನಿಮಾ ‘ಮಾರ್ಟಿನ್‌’ಗೆ ನೂರೆಂಟು ವಿಘ್ನಗಳು ಎದುರಾಗಿವೆ. ಅಭಿಪ್ರಾಯ ಬೇಧಗಳು ಸಹಜ. ಆದರೆ ವಿರೋಧಿಗಳು ತಮ್ಮ ಪ್ರಾಮಾಣಿಕ ಅಭಿಪ್ರಾಯ ಹೇಳದೇ ಕೇವಲ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥವರಿಗೆ ನಟ ಧ್ರುವ ಸರ್ಜಾ ಖಡಕ್ ಉತ್ತರ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾರ್ಟಿನ್ ಚಿತ್ರವನ್ನು ಹೀನಾಮಾನವಾಗಿ ಟ್ರೋಲ್ ಮಾಡುತ್ತಿದೆ.

ಹಾಗಂಥ. ಇದೆಲ್ಲದರಿಂದ ಚಿತ್ರತಂಡ ತಲೆ ಕೆಡಿಸಿಕೊಂಡು ಕುಂತಿಲ್ಲ. ಯಾಕೆಂದರೆ, ಚಿತ್ರತಂಡದ ಪ್ರಕಾರ ಚಿತ್ರ ಗೆಲುವಿನತ್ತ ಸಾಗಿದೆ. ಇದಕ್ಕೆ ಪೂರಕವಾಗಿ ಚಿತ್ರತಂಡ ಹೆಮ್ಮೆಯಿಂದ ಚಿತ್ರದ ಮೊದಲೆರಡು ದಿನದ ಗಳಿಕೆಯನ್ನು ಕೂಡ ಸಾರ್ವಜನಿಕವಾಗಿ ಹಂಚಿಕೊಂಡಿದೆ. ಕರುನಾಡಿನೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ಮೊದಲ ದಿನ ಕರ್ನಾಟಕದಲ್ಲಿ ಸಿನಿಮಾ 9.1 ಕೋಟಿ ರೂ ಗಳಿಸಿದ್ದರೆ ಎರಡನೇ ದಿನ 13.4 ಕೋಟಿ ರೂಪಾಯಿಯನ್ನು ಕೊಳ್ಳೆ ಹೊಡೆದಿದೆ ಎಂದು ಎದೆ ತಟ್ಟಿಕೊಂಡು ಹೇಳಿದೆ.

ಇದರ ನಡುವೆ ಧ್ರುವಾ ಸರ್ಜಾ ಕಾಲೆಳೆಯುವರು ಕಾಲ ಕೆಳಗೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹೌದು, ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಸ್ವಾಗತದ ನಂತರ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಧ್ರುವ ಸರ್ಜಾ ವ್ಯಕ್ತವಾಗುತ್ತಿರುವ ನಕರಾತ್ಮಕ ಪ್ರತಿಕ್ರಿಯೆಯ ಕುರಿತು ಮೌನ ಮುರಿದಿದ್ದಾರೆ. ಹೊಟೇಲ್‌ನಲ್ಲಿ ಒಬ್ಬರಿಗೆ ಇಷ್ಟವಾದ ತಿಂಡಿ ಮತ್ತೊಬ್ಬರಿಗೆ ಇಷ್ಟವಾಗ್ಲೇ ಬೇಕು ಎಂದೇನಿಲ್ಲ. ಕೆಲವರಿಗೆ ಇಷ್ಟವಾಗುತ್ತೆ, ಕೆಲವರಿಗೆ ಇಷ್ಟವಾಗಲ್ಲ ಎಂದು ಹೇಳಿದ್ದಾರೆ. ತುಂಬಾ ಅಂದರೆ ತುಂಬಾ ಇಷ್ಟವಾದರೆ ಕೆಲವರು ತಡೆಯಲ್ಲ, ಹೇಗಾದರೂ ಮಾಡಿ ಇದನ್ನು ಹಾಳು ಮಾಡಬೇಕೆಂದು ಆಲೋಚನೆ ಮಾಡುತ್ತಾರೆ, ರಾತ್ರಿಯಿಡಿ ತಲೆಕೆಡಿಸಿಕೊಂಡು ಮೆಸೇಜ್ ಮಾಡುತ್ತಾರೆ ಎಂದು ಹೇಳಿದ್ದಾರೆ. ನನಗೇನು ಖುಷಿಯೆಂದರೆ ಅವರಿಗೆಲ್ಲ ನಾನು ಕೆಲಸ ಕೊಟ್ಟಿದ್ದೀನಿ ಎನ್ನುವುದಷ್ಟೇ ಎಂದು ನಕ್ಕಿದ್ದಾರೆ.

Advertisement

ಇನ್ನೂ ಮಾರ್ಟಿನ್ ಚಿತ್ರದ ಅಪಪ್ರಚಾರವನ್ನು ನಮ್ಮವರೇ ಕೆಲವರು ಮಾಡುತ್ತಿರುವ ಈ ಸಮಯದಲ್ಲಿ, ಧ್ರುವ ಸರ್ಜಾ ಅವರ ಅಭಿನಯಕ್ಕೆ, ಅವರ ಶ್ರದ್ಧೆ ಮತ್ತು ಶ್ರಮಕ್ಕೆ ಉತ್ತರ ಭಾರತದಲ್ಲಿ ಅನೇಕರು ಅಭಿಮಾನಿಗಳಾಗಿದ್ಧಾರೆ. ನಿಮಗೆ ಧ್ರುವ ಸರ್ಜಾ ಬೇಡವಾದರೆ ನಮ್ಮಲ್ಲಿ ಅವರನ್ನು ಕಳುಹಿಸಕೊಡಿ ನಮಗೆ ಧ್ರುವ ಅವರಂತಹ ಮಾಸ್ ಹೀರೋ ಬೇಕು ಎನ್ನುತ್ತಿದ್ದಾರೆ. ಮಾರ್ಟಿನ್ ನಮಗೆ ತುಂಬಾ ಇಷ್ಟವಾಯ್ತು, ನಿಮಗೆ ಇಷ್ಟವಾಗದೇ ಇದ್ದರೆ ಪರವಾಗಿಲ್ಲ ಆದರೆ ಚಿತ್ರದ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಮನವಿಯನ್ನೂ ಕೂಡ ಹಿಂದಿ ಯೂಟ್ಯೂಬರ್‌ನವರು ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರಕ್ಕೂ ರಿಪಬ್ಲಿಕ್ ಟಿವಿ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆಯನ್ನು ನೀಡಿರುವ ಧ್ರುವ ಸರ್ಜಾ ಅಭಿಮಾನಕ್ಕೆ ಋಣಿ ಆದರೆ ಕರ್ನಾಟಕದಲ್ಲಿ ನನ್ನನ್ನು ತುಂಬಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement