ಮಾಲೆ: ಚೀನಾ ಬೆಂಬಲದಿಂದ ಮತ್ತೆ ಅತಿರೇಕದ ಮಾತುಗಳನ್ನಾಡಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು, ಮೇ 10 ರ ಬಳಿಕ ಭಾರತದ ಯಾವೊಬ್ಬ ಮಿಲಿಟರಿ ಸದಸ್ಯ ದೇಶದಲ್ಲಿ ಇರಬಾರದು ಎಂದು ಮತ್ತೆ ಕಿರಿಕ್ ತೆಗೆದಿದ್ದಾರೆ.
ಚೀನಾದೊಂದಿದೆ ರಕ್ಷಣ ಒಪ್ಪಂದ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಭಾರತೀಯ ಮಿಲಿಟರಿಯವರು ಮಾಲ್ಡೀವ್ಸ್ ನಿಂದ ನಿರ್ಗಮಿಸುತ್ತಿಲ್ಲ. ನಮ್ಮ ಆದೇಶದ ಹೊರತಾಗಿಯೂ ಭಾರತೀಯ ಸೈನಿಕರು ದೇಶವನ್ನು ತೊರೆಯಲು ಸಿದ್ಧರಿಲ್ಲ. ತಮ್ಮ ಸೇನಾ ಸಮವಸ್ತ್ರವನ್ನ ಧರಿಸದೇ ನಾಗರಿಕ ಉಡುಪು ಧರಿಸಿ ಮಾರು ವೇಷದಲ್ಲಿ ಬರುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಮಾಲ್ಡೀವ್ಸ್ ನಿಂದ ಭಾರತೀಯ ಸೈನಿಕರನ್ನು ವಜಾಗೊಳಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದ್ದರೂ ಕೂಡಾ ಜನರು ವದಂತಿಗಳನ್ನು ಹರಡುತ್ತಿದ್ದಾರೆ. ಮೇ 10ರ ನಂತರ ಮಾಲ್ಡೀವ್ಸ್ ನಲ್ಲಿ ಯಾವುದೇ ಭಾರತೀಯ ಸೇನಾ ಪಡೆ ಬರುವಂತಿಲ್ಲ, ಅದು ಸಮವಸ್ತ್ರ ಆಗಿರಲಿ, ನಾಗರಿಕ ಉಡುಪಾಗಿರಲಿ, ಯಾವುದಕ್ಕೂ ಅವಕಾಶ ಇಲ್ಲ ಎಂದು ಭಾರತದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಭಾರತ ಹಾಗೂ ಮಾಲ್ಡೀವ್ಸ್ ದೇಶಗಳ ನಡುವೆ ಉನ್ನತಮಟ್ಟದ ಮಾತುಕತೆ ನಡೆದಿತ್ತು. ಈ ವೇಳೆ ಮಾಲ್ಡೀವ್ಸ್ ನ 3 ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯ ಸೈನಿಕರು ಮೇ 10ರ ಒಳಗಾಗಿ ಭಾರತಕ್ಕೆ ಹಿಂತಿರುಗಲು ತೀರ್ಮಾನ ಮಾಡಲಾಗಿತ್ತು. ಇದರ ಮೊದಲ ಹಂತವಾಗಿ ಮಾರ್ಚ್ 10ರ ಒಳಗೆ ಒಂದಿಷ್ಟು ಭಾರತೀಯ ಸೈನಿಕರು ಮಾಲ್ಡೀವ್ಸ್ ತೊರೆಯಬೇಕಿತ್ತು.