ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ.!

 

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮವೂ ನೆರೆದಿದ್ದ ಅಸಂಖ್ಯಾಂತ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಿತು.

ಮಾ.೧೫ ರಂದು ಸ್ವಾಮಿಗೆ ರುದ್ರಾಭಿಷೇಕ, ಕಂಕಣಧಾರಣೆ, ಪಲ್ಲಕ್ಕಿ ಉತ್ಸವ ಧ್ವಜಾರೋಹಣ ಕಾರ್ಯಕ್ರಮವೂ ನೆಲ್ಲಿಕಟ್ಟೆ ಗ್ರಾಮಸ್ಥರಿಂz, ಮಾ. ೧೬ರಂದು ಅಶ್ವೋತ್ಸವ ಬೆಟ್ಟದನಾಗೇನಹಳ್ಳಿ ಗ್ರಾಮಸ್ಥರಿಂದ, ಮಾ. ೧೭ ರಂದು ವೃಷಭೋತ್ಸವ ಬಸವಾಪುರ ಗ್ರಾಮಸ್ಥರಿಂದ, ಫೆ.೧೮ ರಂದು ಬೆಳ್ಳಿಗೆ ೬ ಗಂಟೆಗೆ ಹೂವಿನ ಉತ್ಸವ ಸೇವೆ, ಸ್ವಾಮಿಗೆ ಗಜೋತ್ಸವ ಹಾಗೂ ೧೦ಗಂಟೆಗೆ ಕೆಂಡದಾರ್ಚನೆ ಸೇವೆಯನ್ನು ತಿರುಮಲಾಪುರ ಹಾಗೂ ಲಿಂಗದಹಳ್ಳಿ ಗ್ರಾಮಸ್ಥರಿಂದ ನೇರವೇರಿತು.

Advertisement

ಇಂದು ಬೆಳಿಗ್ಗೆ ಸ್ವಾಮಿಗೆ ಎಂದಿನಂತೆ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ನಡೆದಿದ್ದು, ಸಂಜೆ ೪ ಗಂಟೆಗೆ ಸ್ವಾಮಿಗೆ ಹೂವಿನ ಪಲ್ಲಕ್ಕಿ ಉತ್ಸವದ ನಂತರ ಶ್ರೀ ಸ್ವಾಮಿಯ ರಥೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ರಥೋತ್ಸವದ ಅಂಗವಾಗಿ ರಾಜ್ಯದ ವಿವಿಧೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಕ್ರಿಯ ಬಾಗವಹಿಸಿ ರಥವನ್ನು ಭಕ್ತಿಯಿಂದ ಎಳೆಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ರಥೋತ್ಸವದ ಅಂಗವಾಗಿ ಸ್ವಾಮಿಗೆ ಕಂಕಣಧಾರಣೆ, ಆಶ್ವೋತ್ಸವ, ವೃಷಭೋತ್ಸವ ಕೆಂಡಾರ್ಚನೆಯಂತಹ ಕಾರ್ಯಕ್ರಮ ನಡೆಯಿತು.

ಜಾತ್ರೆಯ ಅಂಗವಾಗಿ ದೇವಾಲಯದ ಆವರಣದ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ವಿವಿಧ ರೀತಿಯ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿತ್ತು ಹೂಸದಾಗಿ ಮದುವೆಯಾದ ಜೋಡಿಗಳು ರಥದ ಕಲಶವನ್ನು ನೋಡಬೇಕು ಎನ್ನುವ ಪ್ರತೀತಿ ಇರುವುದರಿಂದ ಹಲವಾರು ಜೋಡಿಗಳೊಂದಿಗೆ ಮಕ್ಕಳು, ವಯೋವೃದ್ದರು, ಮಧ್ಯವಯಸ್ಕನವರು, ಹೆಂಗಸರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಸಂಜೆಯಾಗುತ್ತಿದ್ದಯೇ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ದೇವಾಲಯದ ಆವರಣದಲ್ಲಿ ಮೂರು ಸುತ್ತು ಹಾಕುವುದರ ಮೂಲಕ ನಂತರ ರಥದಲ್ಲಿ ಕುಳ್ಳರಿಸಿದಾಗ ಆಗಮಿಸಿದ್ದ ಭಕ್ತಾಧಿಗಳು ರಥವನ್ನು ಎಳೆಯುವುದರ ಮೂಲಕ ಸ್ವಾಮಿಯ ರಥೋತ್ಸವವನ್ನು ಶ್ರದ್ದಾ ಭಕ್ತಿಯಿಂದ ನೇರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳಿಂದ ಮಾವಿನಹಳ್ಳಿ ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳು ಕೇಳಿ ಬಂದವು. ಈ ಸಂದರ್ಭದಲ್ಲಿ ಸ್ವಾಮಿಯ ಬಾವುಟ, ವಿವಿಧ ರೀತಿಯ ಹೂ ಮಾಲೆಗಳು, ಚೌಡಮ್ಮರ ಹಾರವನ್ನು ಮಹಿಳೆಯರಿಗಾಗಿ ಹರಾಜು ಹಾಕಲಾಯಿತು.

ಸ್ವಾಮಿಯ ರಥೋತ್ಸವದ ಅಂಗವಾಗಿ ಮಾ.೨೦ರ ಸಂಜೆ ೫ಕ್ಕೆ ಕಂಕಣ ವಿಸರ್ಜನೆ ಹಾಗೂ ಮಹಾ ಮಹಾಮಂಗಳಾರತಿಯೊಂದಿಗೆ ಸ್ವಾಮಿಯ ಸೇವಾ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಈ ಸಂದರ್ಭದಲ್ಲಿ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಟ್ರಸ್ಟ್ನ ಉಪಾಧ್ಯಕ್ಷರಾದ ಬಿ.ಎಸ್.ವಿಶ್ವನಾಥ್ಪ್ಪ ಪಟೇಲ್ ಟ್ರಸ್ಟ್ನ ಉಪಾಧ್ಯಕ್ಷರಾದ ಎಸ್.ಬಿ.ಪುಟ್ಟಪ್ಪ ಸ್ಥಾನಿಕ್, ಪ್ರಧಾನ ಕಾರ್ಯದರ್ಶೀ ಆರ್.ಗಂಗಾಧರಪ್ಪ, ಕಾರ್ಯದರ್ಶೀ ಸಿದ್ದೇಶ್ ಸ್ಥಾನಿಕ್, ಸಹ ಕಾರ್ಯದರ್ಶಿ ಟಿ.ಎಸ್.ರುದ್ರಮುನಿಯಪ್ಪ, ಬಸವರಾಜ್ ಸ್ಥಾನಿಕ್, ಅರ್ಚಕರಾದ ಜಯ್ಯಣ್ಣ ಸ್ಥಾನಿಕ್, ವ್ಯವಸ್ಥಾಪಕರಾದ ಟಿ.ಎಂ.ಆನಂದ ಸ್ಥಾನಿಕ್ ಉಪಸ್ಥಿತರಿದ್ದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement