ಮಾ.15 ರಿಂದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸ

 

 

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ  ಮಾ. 15 ರಿಂದ ಮಾ. 20ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಟ್ರಸ್ಟ್ನ ಉಪಾಧ್ಯಕ್ಷರಾದ ಬಿ.ಎಸ್.ವಿಶ್ವನಾಥ್ಪ್ಪ ಪಟೇಲ್ ತಿಳಿಸಿದ್ದಾರೆ.

Advertisement

ಮಾ.15 ರಂದು ರುದ್ರಾಭಿಷೇಕ, ಕಂಕಣಧಾರಣೆ, ಪಲ್ಲಕ್ಕಿ ಉತ್ಸವ ಧ್ವಜಾರೋಹಣ ಕಾರ್ಯಕ್ರಮವೂ ನೆಲ್ಲಿಕಟ್ಟೆ ಗ್ರಾಮಸ್ಥರಿಂದ ನೇರವೇರಲಿದೆ. ಮಾ. 16ರಂದು ಅಶ್ವೋತ್ಸವ ಬೆಟ್ಟದನಾಗೇನಹಳ್ಳಿ ಗ್ರಾಮಸ್ಥರಿಂದ, ಮಾ. 17 ರಂದು ವೃಷಭೋತ್ಸವ ಬಸವಾಪುರ ಗ್ರಾಮಸ್ಥರಿಂದ, ಫೆ.18 ರಂದು ಬೆಳ್ಳಿಗೆ 6 ಗಂಟೆಗೆ ಹೂವಿನ ಉತ್ಸವ ಸೇವೆ, ಸ್ವಾಮಿಗೆ ಗಜೋತ್ಸವ ಹಾಗೂ 10ಗಂಟೆಗೆ ಕೆಂಡದಾರ್ಚನೆ ಸೇವೆಯನ್ನು ತಿರುಮಲಾಪುರ ಹಾಗೂ ಲಿಂಗದಹಳ್ಳಿ ಗ್ರಾಮಸ್ಥರಿಂದ ಮಾ. 19 ರಂದು ಸ್ವಾಮಿಯ ಸಾನಿಧ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಮಧು-ವರನಿಗೆ ಬಟ್ಟೆ, ವಧುವಿಗೆ ತಾಳಿಯನ್ನು ನೀಡಲಾಗುವುದು. ವಿವಾಹ ಆಗಲಿಚ್ಚಿಸುವವರು ದೇವಾಲಯದಲ್ಲಿ ಹೆಸರನ್ನು ನೊಂದಾಯಿಸಬಹುದಾಗಿದೆ.  ಸಂಜೆ 4 ಗಂಟೆಗೆ ಹೂವಿನ ಅಡ್ಡಪಲ್ಲಕ್ಕಿ ನಂತರ 5 ಗಂಟೆಗೆ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮಾ. 20 ರಂದು ಕಂಕಣ ವಿಸರ್ಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಸ್ವಾಮಿಯ ಸೇವೆಗಳು ಮುಕ್ತಾಯ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ದೇವಾಲಯದ ಸ್ವಾಮಿಯ ನೂತನ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದವರು ಕೂಡಲೇ ಸಹಾಯವನ್ನು ಮಾಡುವುದರ ಮೂಲಕ ಶ್ರೀಘ್ರವಾಗಿ ದೇವಾಲಯ ಕಟ್ಟಡ ಪೂರ್ಣವಾಗುವಂತೆ ಮನವಿ ಮಾಡಲಾಯಿತು. ಅಲ್ಲದೆ ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಆಗಮಿಸುವುದರ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾಗಲು ಮನವಿ ಮಾಡಲಾಯಿತು.

ಟ್ರಸ್ಟ್ನ ಉಪಾಧ್ಯಕ್ಷರಾದ ಎಸ್.ಬಿ.ಪುಟ್ಟಪ್ಪ ಸ್ಥಾನಿಕ್, ಪ್ರಧಾನ ಕಾರ್ಯದರ್ಶೀ ಆರ್.ಗಂಗಾಧರಪ್ಪ, ಕಾರ್ಯದರ್ಶೀ ಸಿದ್ದೇಶ್ ಸ್ಥಾನಿಕ್, ಸಹ ಕಾರ್ಯದರ್ಶಿ ಟಿ.ಎಸ್.ರುದ್ರಮುನಿಯಪ್ಪ, ಬಸವರಾಜ್ ಸ್ಥಾನಿಕ್, ಅರ್ಚಕರಾದ ಜಯ್ಯಣ್ಣ ಸ್ಥಾನಿಕ್, ವ್ಯವಸ್ಥಾಪಕರಾದ ಟಿ.ಎಂ.ಆನಂದ ಸ್ಥಾನಿಕ್ ಉಪಸ್ಥಿತರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement