ಮಾರ್ಚ್ 1 ರಂದು ಬಾಂಬ್ ಸ್ಪೋಟ ನಡೆದ ಬಳಿಕ ಮುಚ್ಚಿದ್ದ ರಾಮೇಶ್ವರಂ ಕೆಫೆ ಮತ್ತೆ ಮಾರ್ಚ್ 9ರಂದು ಪುನರಾರಂಭ ಆಗಲಿದೆ.
ಇದೀಗ ರಾಮೇಶ್ವರಂ ಕೆಫೆನಲ್ಲಿ ರೀನೋವೇಶನ್ ಕಾರ್ಯ ಶುರುವಾಗಿದ್ದು, ಶನಿವಾರ ಬೆಳಗ್ಗೆ 6:30 ಕ್ಕೆ ರಿಓಪನ್ ಮಾಡಲಾಗುವುದು ಎಂದು ಪ್ಲೆಕ್ಸ್ ಹಾಕಲಾಗಿದೆ.
ಬಾಂಬ್ ಸ್ಪೋಟ ಪ್ರಕರಣವನ್ನು ಈಗಾಗಲೇ ಎನ್‌ಐಎ ಅಧಿಕಾರಿಗಳು ಪರಿಶೀಲನೆನಡೆಸಿದ್ದಾರೆ. ಸದ್ಯ ಕೆಫೆಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿದ್ದು, ಈಗ ಕೆಫೆ ದುರಸ್ತಿ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ