ಬೆಂಗಳೂರು:ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುದ ಅಬ್ಬರ ಜೋರಾಗಿದ್ದು ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ.
ಈ ಹಿನ್ನಲೆ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಚಂಡಮಾರುತದ ಕಾರಣದಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇದುವರೆಗೆ 27 ವಿಮಾನಗಳು ಬಂದಿಳಿದಿವೆ ಅನ್ನುವ ಮಾಹಿತಿ ಇದೆ. ನಾಳೆ ಮುಂಜಾನೆಯ ವೇಳೆ ಇಲ್ಲಿಂದ ವಿಮಾನಗಳು ಹೊರಡುವ ಸಾಧ್ಯತೆ ಇದೆ . ಆದರೆ ಇದುವರೆಗೂ ಮಳೆ ನಿಲ್ಲುವ ಮನ್ಸೂಚನೆಯೇ ಕಾಣದ ಹಿನ್ನಲೆ. ವಿಮಾನಗಳು ಟೇಕಾಫ್ ಆಗದೆ ಹಾಗೆ ನಿಂತಿದ್ದು, ಚೆನ್ನೈಗೆ ತೆರಳುವ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದೇಶ-ವಿದೇಶಗಳಿಂದ ಬಂದ ಎಮಿರೇಟ್ಸ್, ಲೂಫ್ತಾನ್ಸ, ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದಂತೆ ಸುಮಾರು 27 ವಿಮಾನಗಳು ಲ್ಯಾಂಡ್ ಆಗಿವೆ ಎನ್ನುವ ಮಾಹಿತಿ ವಿಮಾನ ನಿಲ್ಧಾಣದ ಅಧಿಕಾರಿಗಳಿಂದ ಲಭ್ಯವಾಗಿದೆ.
ಮಿಚಾಂಗ್ ಅಬ್ಬರ ಕಾರಣದಿಂದ ತಮಿಳುನಾಡಿನ 4 ಜಿಲ್ಲೆಗಳಾದ ಚೆನ್ನೈ, ತಿರುವಳ್ಳೂರ್, ಕಾಂಚೀಪುರಂ ಹಾಗೂ ಚೆಂಗಲಪಟ್ಟು ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.